Publish Date: Mon, 10 Apr 2023 (15:42 IST)
Updated Date: Mon, 10 Apr 2023 (15:49 IST)
ಮಾಜಿ ಸಿಎಂ B.S. ಯಡಿಯೂರಪ್ಪ ಕರ್ನಾಟಕದ ರಾಜಕಾರಣದಲ್ಲಿ ಅಜಾತಶತ್ರು.. ರಾಜಾಹುಲಿ ಎಂದೇ ಖ್ಯಾತಿ ಪಡೆದಿದ್ದಾರೆ.. ರಾಜ್ಯದಲ್ಲಿ BJP ಹೆಸರೇ ಇಲ್ಲದಿದ್ದಾಗ BJP ಅಧಿಕಾರದ ಗದ್ದುಗೆ ಏರುವಂತೆ ಮಾಡುವಲ್ಲಿ BSY ಶ್ರಮ ಅಧಿಕ.. ಆದರೆ ಇಂದು ದೆಹಲಿಯಲ್ಲಿ ಟಿಕೆಟ್ ಫೈನಲ್ ಮಾಡಲು ನಡೆಸಿದ ಸಭೆಯಿಂದ BSY ಅವರನ್ನು ಹೊರಗಿಡಲಾಗಿದೆ.. BJP ರಾಷ್ಟ್ರೀಯ ಅಧ್ಯಕ್ಷ J.P. ನಡ್ಡಾ ಅವರ ಮನೆಯಲ್ಲಿ ಸಭೆ ನಡೆಸಲಾಗುವುದು, ಬೆಳಗ್ಗೆ 10 ಗಂಟೆಗೆ ಸಭೆಗೆ ಬನ್ನಿ ಎಂದು BSYಗೆ ಸೂಚನೆ ನೀಡಲಾಗಿತ್ತು.. ಆದರೆ ಬಳಿಕ ಬಿಜೆಪಿ ಕಚೇರಿಯಲ್ಲಿ ಸಭೆ ಅಂತಾ ಹೇಳಿ ಹೈಕಮಾಂಡ್ ದೆಹಲಿ ಸುತ್ತಿಸಿದ್ರು.. ಯಡಿಯೂರಪ್ಪ ದೆಹಲಿ ಸುತ್ತುವುದರೊಳಗೆ ಬಿಜೆಪಿ ಕೆಲ ನಾಯಕರ ಜೊತೆ ಹೈಕಮಾಂಡ್ ನಾಯಕರು ಸಭೆ ನಡೆಸಿ ಅಂತ್ಯಗೊಳಿಸಿದ್ರು. ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ ಬಿಜೆಪಿಯ ಮತ್ತೊಂದು ಬಣ ಸಭೆ ನಡೆಸಿದೆ.. ಈ ಸಭೆಯಲ್ಲಿ BJP ರಾಷ್ಟ್ರೀಯ ಅಧ್ಯಕ್ಷ J.P. ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ C.T. ರವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತ್ರ ಭಾಗಿಯಾಗಿದ್ರು.