Publish Date: Mon, 10 Apr 2023 (13:42 IST)
Updated Date: Mon, 10 Apr 2023 (14:19 IST)
ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ಮಾಡಲಾಗಿದೆ.ನಂದಿನಿ ಉಳಿಸಿ, ಕರ್ನಾಟಕ ರೈತರನ್ನ ಬೆಳೆಸಿ ಅಂತಾ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನಂದಿನಿ ಕನ್ನಡಿಗರ ಹೆಮ್ಮೆ, ಅಮೂಲ್ ತ್ಯಜಿಸೋಣ, ನಂದಿನಿ ಬಳಸೋಣ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ಮಾಡಿದ್ದು,ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ಅಮುಲ್ ಭೂತದಹನ ಮಾಡಿ ಆಕ್ರೋಶ ಹೊರಹಾಕಿದ್ದಾರೆ.ಅಲ್ಲದೇ ಗುಜರಾತ್ ಸರ್ಕಾರಕ್ಕೆ ಕರವೆ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.ಬೇಡಾ ಬೇಡ ಅಮುಲ್ ಬೇಡ ಎಂದು ಅಮುಲ್ ಪೋಸ್ಟರ್ ಹರುವ ಮೂಲಕ ನಂದಿನಿ ಉಳಿಸಿ ಎಂದು ಪ್ರತಿಭಟನೆ ಮಾಡಿದ್ದಾರೆ.