Publish Date: Mon, 10 Apr 2023 (15:15 IST)
Updated Date: Mon, 10 Apr 2023 (15:18 IST)
ಬಿಜೆಪಿ ಟಿಕೆಟ್ ಇಂದೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ನೀಡುತ್ತಿದೆ.. ಅದರಲ್ಲೂ ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಬಹುತೇಕ ಶಾಸಕರಿಗೆ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ..10ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಯಿದೆ.. ಆಡಳಿತ ವಿರೋಧಿ ಅಲೆ, ಕಾರ್ಯಕರ್ತರ ವಿರೋಧ, ವೈಯಕ್ತಿಕ ವರ್ಚಸ್ಸು ಕೆಡಿಸಿಕೊಂಡವರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಯಿದೆ.. ಟಿಕೆಟ್ ಕೈತಪ್ಪುವ ಶಾಸಕರನ್ನ ನೋಡುವುದಾದ್ರೆ, ಸುಳ್ಯದ ಶಾಸಕ S. ಅಂಗಾರ, ಪುತ್ತೂರು ಶಾಸಕ ಸಂಜೀವ್ ಮಠಂದೂರು, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ.. ಇನ್ನು ಕುಂದಾಪುರದಲ್ಲಿ ಈಗಾಗಲೇ ಶಾಸಕ ಹಾಲಾಡಿ ಶ್ರೀನಿವಾಸ್ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ.. ಭಟ್ಕಳದಲ್ಲೂ ಹಾಲಿ ಶಾಸಕರ ವಿರುದ್ದ ಆಕ್ಷೇಪ ಕೇಳಿ ಬರುತ್ತಿದೆ.. ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ ವಿರುದ್ಧ ಆಡಳಿತ ವಿರೋಧಿ ಅಲೆ ಕೇಳಿಬರುತ್ತಿದೆ.. ಹೀಗೆ 10 ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದ್ದು, ಸಂಘ ಪರಿವಾರದ ಕಾರ್ಯಕರ್ತರು, ಪಕ್ಷ ನಿಷ್ಠರು, ಯುವ ಮುಖಕ್ಕೆ ಮಣೆ ಹಾಕುವ ಸಾಧ್ಯತೆಯಿದೆ.