Select Your Language

Notifications

webdunia
webdunia
webdunia
webdunia

ಕಾಸರಗೋಡಿನಲ್ಲಿ ಟ್ಯಾಂಕ್ಗಾಗಿ ಗುಂಡಿ ಅಗೆಯುತ್ತಿದ್ದಾಗ ಮನೆ ಅಡಿಯಲ್ಲಿ ಬೃಹತ್ ಸುರಂಗ ಪತ್ತೆ Video

Kasaragod tunnel found
ಕಾಸರಗೋಡು: ಇಲ್ಲಿನ ಮನೆಯೊಂದರ ಆವರಣದಲ್ಲಿ ಸೆಪ್ಟಿಕ್ ಟ್ಯಾಂಕ್‌ಗಾಗಿ ಗುಂಡಿ ತೋಡುತ್ತಿದ್ದಾಗ ಬೃಹತ್ ಸುರಂಗವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಕುತೂಹಲ ಹಾಗೂ ಭೀತಿಯನ್ನು ಹುಟ್ಟುಹಾಕಿದೆ. 

ಮನೆಯ ಸಮೀಪ ಕಾರ್ಮಿಕರು ನೆಲ ಅಗೆಯುತ್ತಿದ್ದಾಗ ಏಕಾಏಕಿ ಭೂಮಿಯ ಅಡಿಯಲ್ಲಿ ದೊಡ್ಡ ಗುಹೆಯಂತಹ ಸುರಂಗ ಮಾರ್ಗ ಕಾಣಿಸಿಕೊಂಡಿದೆ. ಸುರಂಗವು ಎಷ್ಟು ಆಳ ಮತ್ತು ವಿಸ್ತಾರವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಮನೆಯ ಅಡಿಪಾಯಕ್ಕೆ ಧಕ್ಕೆಯಾಗುವ ಸನ್ನಿವೇಶ ನಿರ್ಮಾಣವಾಗಿದೆ. 

ನೆಲದ ಅಡಿಯಲ್ಲಿ ಇಷ್ಟೊಂದು ದೊಡ್ಡ ಸುರಂಗ ಪತ್ತೆಯಾಗಿರುವುದರಿಂದ, ಮನೆ ಕುಸಿದು ಬೀಳುವ ಭೀತಿಯಿಂದಾಗಿ ನಿವಾಸಿಗಳು ಈಗ ತಮ್ಮ ಸ್ವಂತ ಮನೆಯಲ್ಲೇ ವಾಸಿಸಲು ಭಯಪಡುತ್ತಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮತ್ತು ತಜ್ಞರು, ಇದು ಪ್ರಾಚೀನ ಕಾಲದ ಸುರಂಗ ಮಾರ್ಗವೇ ("ಸುರಂಗ ಭಾವಿ" / 'ಮೂನಿಯಾರ') ಅಥವಾ ನೈಸರ್ಗಿಕವಾಗಿ ರೂಪುಗೊಂಡ ಗುಹೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಸದ್ಯಕ್ಕೆ ಈ ಸುರಂಗ ಎಲ್ಲರ ಕೌತುಕದ ಕೇಂದ್ರವಾಗಿದ್ದು ಅಕ್ಕಪಕ್ಕದ ಗ್ರಾಮಗಳಿಂದಲೂ ಕುತೂಹಲದಿಂದ ಈ ಗುಹೆ ವೀಕ್ಷಣೆಗೆ ಜನರು ಬರುತ್ತಿದ್ದಾರೆ.

pic.twitter.com/8yJQIRKuZ7

 

— ಸನಾತನ (सनातन) (@sanatan_kannada) August 18, 2026

Share this Story:

Follow Webdunia kannada

ಮುಂದಿನ ಸುದ್ದಿ

ಭಿಕ್ಷೆ ಕೊಡದಿದ್ದರೆ ಬೇಡ ಹಿಂಸೆ ಮಾಡೋದು ಸರೀನಾ.. ಬಡ ಬಾಲಕನ ಬಳಿ ಕಾರಿನ ಚಾಲಕನ ದರ್ಪ: ಕರುಣಾಜನಕ ವಿಡಿಯೋ