Select Your Language

Notifications

webdunia
webdunia
webdunia
webdunia

ಗುಡಿಸಲಿಗೆ ಬೆಂಕಿ ತಗುಲಿ ವ್ಯಕ್ತಿ ಸಾವು

A man died in a hut fire
ಹಾವೇರಿ , ಶನಿವಾರ, 4 ಮಾರ್ಚ್ 2023 (17:55 IST)
ಚಪ್ಪರದ ಗುಡಿಸಲಿಗೆ ಅಕಸ್ಮಿಕ ಬೆಂಕಿ ತಗುಲಿ ಕುರಿ ಸಮೇತ ವ್ಯಕ್ತಿ ಸುಟ್ಟು ಭಸ್ಮವಾಗಿರವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಸಣ್ಣ ತಮ್ಮಪ್ಪ ಜಾಡರ್ ಸಾವನ್ನಪ್ಪಿದ್ದಾನೆ. ಸಣ್ಣ ತಮ್ಮಪ್ಪ ಪ್ರತಿದಿನ ಮನೆಯಲ್ಲಿ ಊಟ ಮಾಡಿ ಕುರಿ ಕಟ್ಟುವ ಚಪ್ಪರದ ಮನೆಯಲ್ಲಿ ಒಂಟಿಯಾಗಿ ಮಲಗುತ್ತಿದ್ದ. ರಾತ್ರಿ ವೇಳೆ ಇದ್ದಕ್ಕಿದ್ದ ಹಾಗೆ ಚಪ್ಪರದ ಮನೆಗೆ ಬೆಂಕಿ ತಗುಲಿದೆ.. ಈ ಹಿನ್ನೆಲೆ ಸಣ್ಣತಮ್ಮಪ್ಪ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾನೆ.. ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಕಿ ಅವಘಡ, 16 ಮಂದಿ ಸಾವು