Publish Date: Sat, 04 Mar 2023 (16:54 IST)
Updated Date: Sat, 04 Mar 2023 (16:57 IST)
ಪಂಚಮಸಾಲಿ ಸಮುದಾಯ ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದಿದೆ.. ಬೆಂಗಳೂರಿನ ನೆಲಮಂಗಲ ಟೋಲ್ ತಡೆದು ಪಂಚಮಸಾಲಿ ಲಿಂಗಾಯತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಭಾಗಿಯಾಗಿದ್ದರು.. ಇನ್ನು ನೂರಾರು ಪಂಚಮಸಾಲಿ ಲಿಂಗಾಯತರು ಭಾಗಿಯಾಗಿದ್ದರು. ರಾಜ್ಯಾದ್ಯಂತ ಪಂಚಮಸಾಲಿ ಸಮುದಾಯ ಪ್ರತಿಭಟನೆ ನಡೆಸಿದೆ.. ಹಾವೇರಿ, ವಿಜಯಪುರ ಸೇರಿ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದೆ.