Publish Date: Sat, 04 Mar 2023 (15:34 IST)
Updated Date: Sat, 04 Mar 2023 (15:37 IST)
ಹೀಗಾಗಲೇ ಭ್ರಷ್ಟಾಚಾರ ಸುಳಿಯಲ್ಲಿ KSDL ಸಂಸ್ಥೆ ಸಿಲುಕಿದೆ. ಇದೀಗ ಮತ್ತೊಬ್ಬ ಪ್ರಭಾವಿ ನಾಯಕನ ಬಗ್ಗೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. KSDL ನೌಕರರ ಒಕ್ಕೂಟದ ಅಧ್ಯಕ್ಷ ಶಿವಶಂಕರ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೈರತಿ ಬಸವರಾಜ್ KSDL ಅಧ್ಯಕ್ಷರಾಗಿದ್ದ ವೇಳೆಯಲ್ಲಿ 150 ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿದ್ರು.. ಬೈರತಿ ಬಸವರಾಜ್ ಶಾಲೆ ಕಟ್ಟುತ್ತೇನೆ ಅಂತೇಳಿ ಅಧ್ಯಕ್ಷರಾಗಿದ್ದ ವೇಳೆಯಲ್ಲಿ 3.70 ಕೋಟಿ ಹಣ ತೆಗೆದುಕೊಂಡು ಹೋದ್ರು.. ಆ ಹಣ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ ಅಂತಾ ಗೊತ್ತಿಲ್ಲ ಎಂದರು.. ಈ ಮೂಲಕ KSDL ನೌಕರರ ಒಕ್ಕೂಟದ ಅಧ್ಯಕ್ಷ ಶಿವಶಂಕರ್ ಹೊಸ ಬಾಂಬ್ ಸಿಡಿಸುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ