Select Your Language

Notifications

webdunia
webdunia
webdunia
webdunia

ಬಿಜೆಪಿ ವಿರುದ್ಧ ಸುರ್ಜೇವಾಲಾ ವಾಗ್ದಾಳಿ

Surjewala rant against BJP
bangalore , ಶನಿವಾರ, 4 ಮಾರ್ಚ್ 2023 (15:18 IST)
ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ, ಕರ್ನಾಟಕವನ್ನ ಲೂಟಿ ಮಾಡುವುದೇ ಬಿಜೆಪಿಯವರ ಕುಲಕಸುಬು ಅಂತಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್ ಸಿಂಗ್​​ ಸುರ್ಜೇವಾಲಾ ಹೇಳಿದ್ರು. ಬಿಜೆಪಿಯೂ ಕರ್ನಾಟಕವನ್ನ ಭ್ರಷ್ಟಾಚಾರದ ಮಾದರಿಯನ್ನಾಗಿ ಮಾಡಿಕೊಂಡಿದ್ದಲ್ಲದೆ, 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದೇ ಪ್ರಸಿದ್ದಿ ಪಡೆದಿದೆ. ದೇಶದಲ್ಲಿ ಯಾರನ್ನೇ ಕೇಳಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಏನು ಅಂತಾ ಹೇಳ್ತಾರೆ. ಗುತ್ತಿಗೆದಾರ ಸಂತೋಷ ಪಾಟೀಲ್ 40 ಪರ್ಸೆಂಟ್ ಕಮೀಷನ್ ಬಗ್ಗೆ ಹೇಳಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬವನ್ನ ಕೇಳಿ ಬೇಕಾದರೆ ಸತ್ಯ ತಿಳಿಯುತ್ತದೆ. 8 ಬಾರಿ ಮೋದಿ ರಾಜ್ಯಕ್ಕೆ ಬಂದಿದ್ದರೂ 40% ಕಮಿಷನ್ ಬಗ್ಗೆ ಮಾತಾಡಿಲ್ಲ, ಕೆಂಪಣ್ಣ ಪತ್ರಕ್ಕೆ ಉತ್ತರ ಇಲ್ಲ. ಹೀಗಿರುವಾಗ ಮೋದಿ ನಾಲ್ಕು ದಿನಗಳ ಹಿಂದೆ ಬೆಳಗಾವಿಗೆ ಬಂದಿದ್ರು. ಆಗ ಏಕೆ ಸಂತೋಷ್ ಪಾಟೀಲ್ ಮನೆಗೆ ಹೋಗಿಲ್ಲ ಎಂದು ಸುರ್ಜೇವಾಲಾ ಟೀಕಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಾಂತ್​ ಕುಟುಂಬಸ್ಥರಿಗೆ ಎದುರಾಯ್ತು ಸಂಕಷ್ಟ