Select Your Language

Notifications

webdunia
webdunia
webdunia
webdunia

ಹೆಬ್ಬಾಳ್ಕರ್ 500 ಕೋಟಿ ಹೇಗೆ ಸಂಪಾದನೆ ಮಾಡಿದ್ರು : ಸಂಜಯ್ ಪಾಟೀಲ್

ಹೆಬ್ಬಾಳ್ಕರ್ 500 ಕೋಟಿ ಹೇಗೆ ಸಂಪಾದನೆ ಮಾಡಿದ್ರು : ಸಂಜಯ್ ಪಾಟೀಲ್
ಬೆಳಗಾವಿ , ಶನಿವಾರ, 4 ಮಾರ್ಚ್ 2023 (13:58 IST)
ಬೆಳಗಾವಿ : 20 ವರ್ಷಗಳ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಬಳಿ 50 ಸಾವಿರ ರೂ. ಹಣ ಪಡೆದಿದ್ದರು. ಇಂದು ಅವರು 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಪ್ರಶ್ನೆಯಿಟ್ಟಿದ್ದಾರೆ.
 
ಸಂಜಯ್ ಪಾಟೀಲ್ ರಾಜಹಂಸಗಡ ಕೋಟೆ ಬಳಿಯ ಮಣ್ಣು ಮಾರಿದ್ದಾರೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೆಬ್ಬಾಳ್ಕರ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏನಾದರೂ ದಾಖಲೆ ಕೊಟ್ಟರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.

20 ವರ್ಷಗಳ ಹಿಂದೆ ನಾನು ರಾಜಕೀಯದಲ್ಲಿ ಇರಲಿಲ್ಲ. ಅವರೂ ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ. ಅಂದು ಅವರು ಗೋಮಟೇಶ್ ವಿದ್ಯಾಪೀಠದ ನನ್ನ ಕಚೇರಿಗೆ ಬಂದಿದ್ದರು. ಆಗ 50 ಸಾವಿರ ರೂ. ನನಗೆ ಸಹಾಯ ಮಾಡಿ ಎಂದು ಕೇಳಿ ಹೋಗಿದ್ದರು. ಆ ಸಮಯ ನನ್ನಿಂದ 50 ಸಾವಿರ ರೂ. ತೆಗೆದುಕೊಂಡು ಹೋದವರು ವಾಪಾಸ್ ಬರಲೇ ಇಲ್ಲ ಎಂದು ಆರೋಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸುಮಲತಾ