Select Your Language

Notifications

webdunia
webdunia
webdunia
webdunia

ನೈಸ್‌ ರಸ್ತೆಯಲ್ಲಿ ತುಂಡಾಗಿ ಹೊರಬಿದ್ದ ಲಾರಿಚಾಲಕನ ಕಾಲು!

accident

geetha

bangalore , ಶುಕ್ರವಾರ, 23 ಫೆಬ್ರವರಿ 2024 (18:21 IST)
ಬೆಂಗಳೂರು :  ಮಾಗಡಿ ಮತ್ತು ಮೈಸೂರು ರಸ್ತೆಯ ಟೋಲ್‌ ನಡುವೆ ಈ ಘಟನೆ ನಡೆದಿದೆ. ಲಾರಿ ಚಾಲಕ ಮತ್ತೊಂದು ವಾಹನದ ಜೊತೆ ಅಪಘಾತವನ್ನು ತಪ್ಪಿಸಲು ಹೋಗಿ ಈ ಸರಣಿ ಅಪಘಾತ ನಡೆದಿದೆ. ಕಾಲು ತುಂಡಾದ ಚಾಲಕನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಸರಣಿ ಅಪಘಾತಕ್ಕೆ  ಲಾರಿ ಚಾಲಕನ ಕಾಲು ತುಂಡಾಗಿರುವ ಘಟನೆ ಶುಕ್ರವಾರ ನೈಸ್‌ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಲಾರಿ, ಕಾರು ಸೇರಿ ಹಲವು ವಾಹನಗಳಳು ಜಖಂಗೊಂಡಿವೆ.

ಇತರೆ ಕಾರ್‌ ಮತ್ತು ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸರಣಿ ಅಪಘಾತದಿಂದಾಗಿ ನೈಸ್‌ ರಸ್ತೆಯಲ್ಲಿ ತುಸುಕಾಲ ವಾಹನ ದಟ್ಟಣೆ ಉಂಟಾಗಿದ್ದು, ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಂಚಾರ ನಿಯಂತ್ರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂದ್ರ‌, ತೆಲಂಗಾಣ ಗಡಿಯಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ!