Select Your Language

Notifications

webdunia
webdunia
webdunia
webdunia

ಸಾರ್ವಜನಿಕ ಆಸ್ಪತ್ರೆಯಲ್ಲಿ ತಲೆ ಎತ್ತಿವೆ ಕಿಲ್ಲರ್ ಪಿಲ್ಲರ್

ಸಾರ್ವಜನಿಕ ಆಸ್ಪತ್ರೆಯಲ್ಲಿ ತಲೆ ಎತ್ತಿವೆ ಕಿಲ್ಲರ್ ಪಿಲ್ಲರ್
bangalore , ಮಂಗಳವಾರ, 8 ಆಗಸ್ಟ್ 2023 (21:00 IST)
ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ದೂರುಗಳು ಕೇಳಿಬರುತ್ತಿದೆ.ಸಮಸ್ಯೆಗಳ ಅಗರವೇ ಜಯನಗರ ಸರ್ಕಾರಿ ಆಸ್ಪತ್ರೆಯಾಗಿದೆ ಇಲ್ಲಿನ ಅವ್ಯವಸ್ಥೆಗಳೂ ರೋಗಿಗಳಲ್ಲಿ ಭಯ ಸೃಷ್ಟಿಸುತ್ತಿದೆ.ಇನ್ನೂ ಈ ಆಸ್ಪತ್ರೆ  ಬಹಳ ವರ್ಷ ಹಳೆಯದಾಗಿದ್ದು, ಆಸ್ಪತ್ರೆಯ ಕೆಲವೊಂದು ಭಾಗದಲ್ಲಿ ಸಿಮೆಂಟ್ ಕಿತ್ತು ಹೋಗಿದೆ. ಮಳೆ ಬಂದರೆ ಸಾಕು  ಆಸ್ಪತ್ರೆಯ ಮಹಡಿ ಸೋರಲಾರಂಭಿಸುತ್ತೆ.
 
 ಎಕ್ಸ್ ರೇ ಸೆಂಟರ್ ಗಳ ಬಳಿ ಇರೋ ಪಿಲ್ಲರ್ ಇವತ್ತೋ ನಾಳೆಯೋ  ಕುಸಿಯೋ ಸ್ಥಿತಿಯಲ್ಲಿದ್ದು ,ಸಿಬ್ಬಂದಿಗಳಿಗೆ  ಹಾಗೂ  ರೋಗಿಗಳಿಗೆ ಆತಂಕ ಹೆಚ್ಚಾಗಿದೆ. ಇನ್ನೂ ಜೀವ ಉಳಿಸಿ ಕೊಳ್ಳಲು ಬಂದವರು ಜೀವ ಕಳೆದು ಕೊಳ್ಳೋ ಭಯ ಶುರುವಾಗಿದೆ. ಇಲ್ಲಿಯವರೆಗೂ ಸರ್ಕಾರ ಆಸ್ಪತ್ರೆಗೆ ಬೇಕಾಗಿರುವ ಸಾಮಾಗ್ರಿಗಳು ಖರೀದಿಗೆ ಮಾತ್ರ ಅನುದಾನ ಮಾಡುತ್ತಿತ್ತು.ಆಸ್ಪತ್ರೆಗಳ ಸ್ಥಿತಿ ಗತಿಗಳ ಬಗ್ಗೆ ಯಾರು ಮಾತಾನಾಡದೆ ರಿನೋವೇಷನ್ ಭಾಗ್ಯ ದೊರೆಯದೆ ಬಿರುಕು ಬಿಟ್ಟಿರುವ ಗೋಡೆಗಳ ಮದ್ಯೆಯೇ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿದೆ.
 
ಜಯನಗರ  ಆಸ್ಪತ್ರೆಗೆ ಇತ್ತೀಚೆಗೆ ಆರೋಗ್ಯ ಸಚಿವ ದೀನೇಶ್ ಗುಂಡುರಾವ್ ಬೇಟಿ ಮಾಡಿ ಪರೀಶೀಲನೆ ನಡೆಸಿದಾಗ ಈ ಎಲ್ಲಾ ಸಮಸ್ಯೆಗಳು ಬೆಳಕಿಗೆ ಬಂದಿತ್ತು.ಇನ್ನು ಇದರ ಬಗ್ಗೆ ಅಧಿಕಾರಿಗಳೊಂದಿಗೆ ತೀವ್ರ ಚರ್ಚೆ ನಡೆಸಿ ಖಡಕ್ ಆದೇಶ ನೀಡಿದ್ರು.ಆದಾದ  ಬಳಿಕ ಅಧಿಕಾರಿಗಳು ಆಲರ್ಟ್ ಆಗಿದ್ದಾರೆ.ಇನ್ನೂ ಜಯನಗರ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳಲ್ಲಿರುವ ತೊಂದರೆಗಳನ್ನು ಆರೋಗ್ಯ ಇಲಾಖೆ ತೀವ್ರವಾಗಿ ಪರಿಗಣಿಸಿದ್ದು, ಜಯನಗರ ಆಸ್ಪತ್ರೆಯ ಅಭಿವೃದ್ಧಿಗೆ ಮುಂದಾಗಿದೆ, ಅದಷ್ಟು ಬೇಗ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ನಿರ್ವಹಣೆ ಮಾಡಲು ಆರೋಗ್ಯ ಇಲಾಖೆ ಸಜ್ಜಾಗಿದೆ.ಇನ್ನು ಎರಡು ವರ್ಷಗಳಿಂದ ಪಾಲು ಬಿದ್ದಿರುವ ಎಕ್ಸ್ ರೇ ಸೆಂಟರ್ ಗೆ ಜೀವ ನೀಡಲು ಆರೋಗ್ಯ ಇಲಾಖೆ ಈಗ ಮುಂದಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಪೆಗ್ ಲಿಮಿಟ್ ನ ಎರಡು ಪೆಗ್ ಗೆ ಏರಿಸಬೇಕು-ವಾಸನ್