Publish Date: Sat, 09 Nov 2019 (20:50 IST)
Updated Date: Sat, 09 Nov 2019 (20:52 IST)
ತವರು ಮನೆಯಲ್ಲಿಯೇ ಗೃಹಿಣಿಯೊಬ್ಬಳು ತನ್ನ ಗಂಡನಿಂದಲೇ ಭೀಕರವಾಗಿ ಕೊಲೆಗೀಡಾಗಿರೋ ಘಟನೆ ನಡೆದಿದೆ.
ಶಂಕ್ರವ್ವ ಎಂಬ ಗೃಹಿಣಿಯನ್ನು ಆಕೆಯ ಗಂಡ ಈಶ್ವರಪ್ಪ ಪೂಜಾರ ಕೊಡಲಿಯಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಗಂಡ ಈಶ್ವರಪ್ಪ ಹಾಗೂ ಹೆಂಡತಿ ಶಂಕ್ರವ್ವ ನಡುವೆ ಜಗಳ ನಡೆದಿತ್ತು. ಗಂಡನ ವರ್ತನೆಯಿಂದ ಬೇಸತ್ತು ತವರು ಮನೆ ಸೇರಿಕೊಂಡಿದ್ದಳು.
ಪತ್ನಿಯ ಮನೆಗೆ ಬಂದಿದ್ದ ಈಶ್ವರಪ್ಪ, ತನ್ನ ಪತ್ನಿ ಶಂಕ್ರವ್ವಳನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.