ಬಸ್ ಹತ್ತುತ್ತಿದ್ದ ವೇಳೆಯಲ್ಲೇ ಬಸ್ ಹಿಂದಕ್ಕೆ ಚಲಿಸಿದ ಪರಿಣಾಮ ಬಾಲಕನೊಬ್ಬ ಬಸ್ ನ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಹತ್ತುತ್ತಿದ್ದ ವೇಳೆ ಬಸ್ ರಿವರ್ಸ್ ಚಲಿಸಿದ ಕಾರಣ 10 ವರ್ಷದ ಬಾಲಕ ಮಹಮ್ಮದ ರಿಜ್ವಾನ್ ಚೌಧರಿ ಬಸ್ನ ಹಿಂದಿನ ಟೈಯರಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತ ಬಾಲಕ ಪೀರನವಾಡಿಯ ಡಿವೈನ್ ಮರ್ಸಿ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ.
ಬೆಳಿಗ್ಗೆ ಮಹಮ್ಮದ ರಿಜ್ವಾನ್ ಚೌಧರಿ ಅವರ ತಾತ ಆತನನ್ನು ಬಿಡಲು ಬಂದಿದ್ದರು. ಈ ವೇಳೆ ಮಹಮ್ಮದ ರಿಜ್ವಾನ್ ಬಸ್ಸಿನ ಟೈಯರ್ ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ತಾತನ ಕಣ್ಣ ಮುಂದೆಯೇ ಘಟನೆ ನಡೆದಿದೆ. ಈ ಸಂಬಂಧ ವಡಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.