ಅನಿಲ ಪೈಪ್ ಸೋರಿಕೆಯಾಗಿ ಬಾನೆತ್ತರ ಹರಡಿದ ಹೊಗೆ, ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾದರು.
ಬೆಳಗಾವಿಯ ಬಾಕ್ಸೈಟ್ ರಸ್ತೆಯ ಮಾರ್ಗದಲ್ಲಿ ಅನಿಲ ಪೈಪ್ ಸೋರಿಕೆಯಾಗಿ ಬಾನೆತ್ತರ ಹರಡಿದ ಹೊಗೆ, ಬೆಂಕಿ ಕಾಣಿಸಿಕೊಂಡಿದ್ದರಿಂದ ವಾಹನ ಸವಾರರು ಕೆಲಕಾಲ ಕಂಗಾಲಾಗುವಂತೆ ಮಾಡಿತು.
ಮರಾಠಾ ಮಂಡಳ ದಂತ ವೈದ್ಯಕೀಯ ಮಹಾವಿದ್ಯಾಲಯದ ಹತ್ತಿರ ಗ್ಯಾಸ್ ಸೋರಿಕೆಯಾಗಿ ಮುಂಜಾನೆ ಸ್ಪಲ್ಪ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ದುರಸ್ತಿಗೊಳಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದಕ್ಕೆ ಮಧ್ಯಾಹ್ನದ ವೇಳೆಗೆ ಆತಂಕ ಸೃಷ್ಠಿಸುವ ಹೊಗೆ ಬರೋದಕ್ಕೆ ಶುರುಮಾಡಿತು.
ಇದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯರಿಗೆ ಜೀವ ಬಾಯಿಗೆ ಬಂದತಾಗಿತ್ತು. ಅನಿಲ ಪೈಪ್ ಲೈನ್ ಈ ಮಾರ್ಗವಾಗಿ ಹಾಯ್ದುಹೋಗಿದ್ದು, ಕೆಲ ಕಾಲ ಸಾರ್ವಜನಿಕರು ಆತಂಕಕ್ಕೆ ಒಳಗಾದರು.