Select Your Language

Notifications

webdunia
webdunia
webdunia
webdunia

ಪವರ್ ಲೀಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಹುಡುಗಿ

ಪವರ್ ಲೀಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಹುಡುಗಿ
ಬೆಂಗಳೂರು , ಶುಕ್ರವಾರ, 21 ಸೆಪ್ಟಂಬರ್ 2018 (16:13 IST)
ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲೀಫ್ಟಿಂಗ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ದೊರೆತಿದೆ.

ಈ ಸಾಧನೆ ಮಾಡಿದ ಹುಡುಗಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರೋ ಕುಗ್ರಾಮವಾದ ಸೋಲೂರೂ ಗ್ರಾಮದವರಾಗಿದ್ದಾರೆ. ಚಿನ್ನದ ಪದಕ ಗೆದ್ದಿದ್ದಕ್ಕೆ ತಾಲೂಕಿನಾದ್ಯಂತ ಹರ್ಷ ವ್ಯಕ್ತವಾಗಿದೆ.
ಇನ್ನು ಈ ಸಾಧನೆ ಮಾಡಿರೋದು ಗುರುಮೂರ್ತಿ ವನಜಾಕ್ಷಿ ದಂಪತಿಯ ಪುತ್ರಿ ಶಾಲಿನಿ.  ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶಾಲಿನಿ   63 ಕೆ.ಜಿ. ವಿಭಾಗದ ಬೆಂಚ್ ಪ್ರೆಸ್ ಪವರ್ ಲೀಫ್ಟಿಂಗ್ ನಲ್ಲಿ ಮೊದಲ ಸ್ಥಾನಗಳಿಸಿದ ಶಾಲಿನಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಗಳು ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಪೋಷಕರು ಹರ್ಷ ಮುಗಿಲು ಮುಟ್ಟಿದ್ದು ಮನೆಯಲ್ಲಿ ಸಂಭ್ರಮದ ವಾತಾವರಣವಿದೆ. ಶಾಲಿನಿ ತಂದೆ ತಾಯಿ ಹಾಗೂ ಸಹೋದರ ಪರಸ್ಪರ ಸಿಹಿ ತಿನಿಸುವ ಮೂಲಕ ಸಂಭ್ರಮ ಹಂಚಿಕೊಂಡರು. ಶಾಲಿನಿ ವಿಡಿಯೋ ಕಾಲ್ ಮಾಡುವ ಮೂಲಕ ಪೋಷಕರೊಂದಿಗೆ ಹರ್ಷ ಹಂಚಿಕೊಂಡು ತನ್ನ ಸಾಧನೆಗೆ ಶ್ರಮಿಸಿದ  ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ