Select Your Language

Notifications

webdunia
webdunia
webdunia
webdunia

8 ಅಂಗಡಿಗಳಿಗೆ ಕಳ್ಳರ ಗ್ಯಾಂಗ್​​ ಕನ್ನ

A gang of thieves stole 8 shops
ಹಾಸನ , ಶನಿವಾರ, 20 ಆಗಸ್ಟ್ 2022 (20:59 IST)
ಹೊಳೆನರಸೀಪುರ ಪಟ್ಟಣದಲ್ಲಿ ಸರಣಿ ಕಳ್ಳತನ ನಡೆಯುತ್ತಿದೆ. ಕಳ್ಳತನಕ್ಕೆ ಜನರು ಬೇಸತ್ತಿದ್ದು, ಖದೀಮರನ್ನು ಹಿಡಿದು ಶಿಕ್ಷಿಸುವಂತೆ ಪೊಲೀಸರಿಗೆ ಜನರು ಮನವಿ ಮಾಡ್ತಿದ್ದಾರೆ. ಏಳು ದಿನಸಿ ಅಂಗಡಿ, ಒಂದು ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಕಳ್ಳತನ ಮಾಡಲಾಗಿದೆ. ಐದು ಲಕ್ಷ ರೂ. ನಗದು ಹಾಗೂ ಬೆಲೆ ಬಾಳುವ ಬಟ್ಟೆಗಳು, ವಸ್ತುಗಳನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ತಡರಾತ್ರಿ ಹೊಳೆನರಸೀಪುರದ ಗಾಂಧಿವೃತ್ತದಲ್ಲಿರುವ ಬರೋಬ್ಬರಿ 8 ಅಂಗಡಿಗಳಲ್ಲಿ ಕಳ್ಳತನ ನಡೆಸಿದ್ದು, ಹೊಳೆನರಸೀಪುರ ಜನರು ಬೆಚ್ಚಿಬಿದ್ದಿದ್ದಾರೆ. ಅಂಗಡಿ ರೋಲಿಂಗ್ ಶಟರ್ ಮುರಿದು ಒಳ್ಳನುಗ್ಗಿರುವ ಕಳ್ಳರು ಹಣ, ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಖದೀಮರು ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಖ್ಯಾತ ಕಳ್ಳನ ಬಂಧನ...!