Select Your Language

Notifications

webdunia
webdunia
webdunia
webdunia

ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ!

ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ!
ಬೆಂಗಳೂರು , ಗುರುವಾರ, 2 ಫೆಬ್ರವರಿ 2023 (11:45 IST)
ಬೆಂಗಳೂರು  : ವಿಡಿಯೋ ಕಾಲ್ ಮಾಡಿ ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಸ್ನೇಹಿತನಿಗೆ ಚಾಕು ಇರಿದಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲೆನಿನ್ ಕಲೆಕ್ಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮಿಶ್ರಾ ತನ್ನ ಪತ್ನಿಯೊಂದಿಗೆ ಫೋನ್ನಲ್ಲಿ ಮಾತಾಡುತ್ತಿದ್ದ. ಈ ವೇಳೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತ ಅಲ್ಲಿಗೆ ಬಂದಿದ್ದ. ರಾಜೇಶ್ ಮಿಶ್ರಾ ಫೋನ್ ನಲ್ಲಿ ಮಾತಾಡುತ್ತಿದ್ದನ್ನು ನೋಡಿ, ವಿಡಿಯೋ ಕಾಲ್ ಮಾಡು, ನಿನ್ನ ಹೆಂಡತಿಯನ್ನು ನೋಡ್ಬೇಕು ಅಂದಿದ್ದಾನೆ.

ಇದರಿಂದ ಕೋಪಗೊಂಡ ರಾಜೇಶ್ ಮಿಶ್ರಾ, ಸುರೇಶ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾನೆ. ಮಾತು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸುರೇಶ್ ರಾಜೇಶ್ ಮಿಶ್ರಾಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜೇಶ್ ಮಿಶ್ರಾನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಫಲವತ್ತಾದ ಭೂಮಿಯಲ್ಲಿ ಕಾರಿಡಾರ್ ಬೇಡ : ಬೊಮ್ಮಾಯಿ