ಪಾರ್ಕಿಂಗ್ ವಿಚಾರಕ್ಕೆ ಜಗಳ ಯುವಕನ ಹತ್ಯೆ..!

Webdunia
ಶನಿವಾರ, 1 ಏಪ್ರಿಲ್ 2023 (13:00 IST)
ಆತ ಉಡುಪಿ ಮೂಲದವ್ನು.ಇವ್ರು ಪಶ್ಚಿಮ ಬಂಗಾಳದವ್ರು.ಬೆಂಗಳೂರಲ್ಲಿ ಬಂದು ಬದುಕು ಕಟ್ಟಿಕೊಂಡಿದ್ರು.ಮೂವರು ಒಂದೇ ಮನೆಯಲ್ಲಿ ವಾಸ ಮಾಡ್ತಿದ್ರು.ಟಿವಿ ರಿಪೇರಿ ಮಾಡ್ತಾ ಜೀವನದ ಬಂಡಿ ಸಾಗಿಸ್ತಿದ್ರು.ಆದ್ರೆ ಒಟ್ಟಿಗೆ ಇದ್ದ ಮೂವರ ಮಧ್ಯೆ ಘನಘೋರವೇ ನಡೆದುಹೋಗಿದೆ.ಬೈಕ್ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯಕಂಡಿದೆ.ಯುವಕನ ಹೆಸರು ಜನಾರ್ದನ ಭಟ್ಟ..29 ವರ್ಷದ ಜನಾರ್ದನ ಭಟ್ಟ ಉಡುಪಿ ಮೂಲದವ್ನು.ಇನ್ನೂ ಈ ಆಸಾಮಿಗಳ ಹೆಸರು ರಿಜ್ವಾನ್ ಮತ್ತು ಸುಲೇಮಾನ್..ಪಶ್ಚಿಮ ಬಂಗಾಳದವರು..ಎಲ್ಲರೂ ಕೂಡ ಎಲ್ ಜಿ ಕಂಪನಿಯಲ್ಲಿ ಟಿವಿ ರಿಪೇರಿ ಕೆಲಸ ಮಾಡಿಕೊಂಡಿದ್ರು.ಒಂದೇ ಕಡೆ ಕೆಲಸ ಮಾಡೋರು ಅಲ್ವಾ ಅಂತಾ ಯಲಹಂಕದ ಶ್ರೀನಿವಾಸಪುರದಲ್ಲಿರುವ..ವಿಶ್ವನಾಥನಗರದಲ್ಲಿರುವ ಸಾಯಿ ಸಮೃದ್ಧಿ ಸ್ಲಂ ಬೋರ್ಡ್ ಅಪಾರ್ಟ್ಮೆಂಟ್ ನಲ್ಲಿ ಒಂದು ಮನೆ ಮಾಡಿ ಕೊಟ್ಟಿದ್ರು..ಆದ್ರೆ ಇದೇ ಮನೆಯಲ್ಲಿ ಮಾರ್ಚ್ 29 ರಂದು ಘನಘೋರವೇ ನಡೆದುಹೋಗಿದೆ.

ರಿಜ್ವಾನ್ ಹಾಗೂ ಸುಹೇಲ್ ಮತ್ತು ಜನಾರ್ದನ ಭಟ್ಟ ನಡುವೆ ಕಳೆದ ಮೂರು ದಿನಗಳಿಂದ ಬೈಕ್  ಪಾರ್ಕಿಂಗ್ ವಿಚಾರಕ್ಕೆ ಜಗಳ ನಡೀತಾ ಇತ್ತಂತೆ.ಇದು ಅಕ್ಕಪಕ್ಕದ ಮನೆಯವ್ರ ಗಮನಕ್ಕೂ ಬಂದಿತ್ತು.ಅದೇ ಪಾರ್ಕಿಂಗ್ ವಿಚಾರಕ್ಕೆ ಜನಾರ್ಧನ ಭಟ್ಟ ಕೊಲರಯಾಗಿದೆ ಎನ್ನಲಾಗ್ತಿದೆ.29 ರ ರಾತ್ರಿ ಕೂಡ ಮೂವರ ಮಧ್ಯೆ ಗಲಾಟೆಯಾಗಿದೆ.ಈ ವೇಳೆ ರಿಜ್ವಾನ್ ಮತ್ತು ಸುಲೇಮಾನ್ ಜನಾರ್ದನ ಭಟ್ಟನ ಮೇಲೆ ಹಲ್ಲೆ ಮಾಡಿದ್ದಾರೆ.ನಂತರ ವೈಯರ್ ನಿಂದ ಕೈ ಕಾಲು ಕಟ್ಟಿ ಹಾಕಿದ್ದಾರೆ.ಬಾಯಿಗೆ ಟೇಪ್ ಸುತ್ತಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ.ಕೊಂದ ಬಳಿಕ ಎಸ್ಕೇಪ್ ಆಗಿದ್ದಾರೆ.ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.ಅದೇನೇ ಹೇಳಿ ಸ್ನೇಹಿತರು ಅಂದಮೇಲೆ ಸಣ್ಣಪುಟ್ಟ ಜಗಳ,ತಮಾಷೆ ಕಾಮನ್.ಅದೇ ಸಣ್ಣ ವಿಚಾರಕ್ಕೆ ಓರ್ವನ ಕೊಲೆಯಾಗಿದ್ದು ನಿಜಕ್ಕೂ ವಿಪರ್ಯಾಸ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಧಾನಿಯ ರಸ್ತೆ ಗುಂಡಿಯನ್ನು ವಾರದೊಳಗೆ ಮುಚ್ಚಿ: ಅಧಿಕಾರಿಗಳಿಗೆ ಸಿದ್ದರಾಮಯ್ಯ ತಾಕೀತು

ಟೀಚರ್ ಎನ್ನಲೂ ನಾಲಾಯಕ್, ಚಿತ್ರದುರ್ಗದ ಸಂಸ್ಕೃತ ಶಿಕ್ಷಕ ಬಾಲಕನಿಗೆ ಕಾಲಿನಿಂದ ಒದ್ದ ವಿಡಿಯೋ

ಜಪಾನ್‌ನಲ್ಲಿ ಹೊಸ ಇತಿಹಾಸ ಬರೆದ ಸನೇ ಟಕೈಚಿ, ಮೋದಿಯಿಂದ ಅಭಿನಂದನೆ

ಕಾಂಗ್ರೆಸ್ ಸರ್ಕಾರದ ನಡೆಯಿಂದ ಇರುವ ಕಂಪೆನಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ವಿಷಯ: ಸುಧಾಕರ್ ಕಿಡಿ

ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನಾ ಮರೆತ್ರಾ: ಕೆದಿಕಿದ ರಾಘವೇಂದ್ರಗೆ ಪ್ರಿಯಾಂಕ್ ಖರ್ಗೆ ಕೌಂಟರ್

ಮುಂದಿನ ಸುದ್ದಿ
Show comments