ಸಿದ್ದರಾಮಯ್ಯ ಮನೆ ಮುಂದೆ ಯೋಗೇಶ್ ಬಾಬುಗೆ ಟಿಕೇಟ್ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದೆ.ಅಲ್ಲದೇ ಮೊಳಕಾಲ್ಮುರು ಕ್ಷೇತ್ರ ದವರಿಂದ ಸಿದ್ದು ಕಾರಿಗೆ ಅಡ್ಡಲಾಗಿಯೂ ಮಲಗಿ ಪ್ರತಿಭಟನೆ ಮಾಡಲಾಗಿದೆ.
ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಕಾಂಗ್ರೆಸ್ ಗೆ ಬರ್ತಿದ್ದಾರೆ.ಅವರು ಮೊಳಕಾಲ್ಮೂರು ಬಿಜೆಪಿ ಟಿಕೆಟ್ ಕೇಳ್ತಿದ್ದಾರೆ.ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು ಪಕ್ಷದಲ್ಲಿ ಕೆಲಸ ಮಾಡ್ತಿದ್ದಾರೆ.ಹೀಗಾಗಿ ಯೋಗಿಶ್ ಬಾಬುಗೆ ಟಿಕೆಟ್ ಕೊಡುವಂತೆ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.
ಸಿದ್ದರಾಮಯ್ಯ ನಿವಾಸದ ಬಳಿ ದಾಸರಹಳ್ಳಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಜನರಿಂದ ಪ್ರತಿಭಟನೆ ನಡೆಯುತ್ತಿದ್ದು,ದಾಸರಹಳ್ಳಿಯಲಿ ಧನಂಜಯ್ಗೆ ಟಿಕೆಟ್ ನೀಡುವುದು ಬೇಡ ಎಂದ ಒತ್ತಾಯ ಮಾಡಿದ್ದಾರೆ.ಆಕಾಂಕ್ಷಿ ನಾಗಲಕ್ಷ್ಮೀ ಚೌಧರಿ, ಪಿಎನ್ ಕೃಷ್ಣ ಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದ್ದು.ಯೋಗೇಶ್ ಗೆ ಟಿಕೆಟ್ ನೀಡುವಂತೆ ಮೊಳಕಾಲ್ಮೂರು ಕ್ಷೇತ್ರದವರಿಂದ ಬೆಂಬಲಿಗರು ಅರೆಬೆತ್ತಲೆ ಪ್ರತಿಭಟನೆ ನಡೆಸಿದಾರೆ.