Publish Date: Thu, 30 Mar 2023 (06:29 IST)
Updated Date: Wed, 29 Mar 2023 (23:31 IST)
ಬೆಂಗಳೂರು : ಅದು 2019ರ ಲೋಕಸಭೆ ಚುನಾವಣೆ ಸಂದರ್ಭ. ಆಗ ಕೋಲಾರದಲ್ಲಿ ತಾವು ಮಾಡಿದ ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದ್ಯ ಸಂಸತ್ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ.
ಈಗ ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಅದೇ ಕೋಲಾರ ನೆಲದಿಂದಲೇ ಕಾಂಗ್ರೆಸ್ ನಾಯಕರ ಜೊತೆಗೂಡಿ ಸತ್ಯಮೇವ ಜಯತೆ ಹೋರಾಟ ಆರಂಭಿಸಲು ರಾಹುಲ್ ಗಾಂಧಿ ಬರುತ್ತಿದ್ದಾರೆ.
ತಾನು ಸಂಸದ ಸ್ಥಾನದಿಂದ ಅನರ್ಹಗೊಳ್ಳಲು ಕಾರಣವಾಗಿದ್ದ ನೆಲದಿಂದಲೇ ಈಗ ಮತ್ತೆ ಹೋರಾಟ ನಡೆಸಲು ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. “ಏ.5 ರಂದು ಕೋಲಾರಕ್ಕೆ ಬಂದು ಮಹಾತ್ಮ ಗಾಂಧೀಜಿ ಅವರ ಮೂಲ ಮಂತ್ರವಾದ ಸತ್ಯಮೇವ ಜಯತೆ ಹೋರಾಟ ನಡೆಸಲಿದ್ದಾರೆಂದು” ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.