ಬಾಲಕನೋರ್ವ ತನ್ನ ಶಾಲೆ ಹಾಗೂ ಇತರೆಡೆ ನಡೆದ ಹಲವು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಪ್ರಶಸ್ತಿ ಮೊತ್ತದಲ್ಲಿ ಸಿಕ್ಕಿದ ಹಣದಿಂದ ತನ್ನನ್ನು ಪುಟ್ಟ ಮಗುವಾಗಿದ್ದಾಗಿನಿಂದಲೂ ನೋಡಿಕೊಳ್ಳುತ್ತಿದ್ದ ಅಮ್ಮನ ಮನಸ್ಸಿನ ಅಜ್ಜಿಯ ಪ್ರೀತಿ ತುಂಬಿದ ಮನೆಕೆಲಸದಾಕೆಗೆ ಮೊಬೈಲ್ ಫೋನ್ ತೆಗೆಸಿಕೊಟ್ಟಿದ್ದಾನೆ.
ಪುಟ್ಟ ಬಾಲಕನ ಈ ದೊಡ್ಡತನದ ಸ್ಟೋರಿ ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು, ಅನೇಕರು ಬಾಲಕನಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.