Publish Date: Thu, 14 Dec 2023 (15:20 IST)
Updated Date: Thu, 14 Dec 2023 (14:37 IST)
ಶೀಘ್ರದಲ್ಲೇ ಆಟೋ ಮೀಟರ್ ದರ ಹೆಚ್ಚಳವಾಗುತ್ತೆ.ಇನ್ಮೇಲೆ ಪ್ರತಿ ವರ್ಷವೂ ಆಟೋ ಪ್ರಯಾಣ ದರ ಏರಿಕೆಯಾಗಲಿದ್ದು,ವರ್ಷಕ್ಕೊಮ್ಮೆ ಆಟೋ ಪ್ರಯಾಣ ದರ ಏರಿಸುವಂತೆ ಆಟೋ ಚಾಲಕರು,/ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಹಾಗಾದ್ರೆ ಸರ್ಕಾರ ಇನ್ಮೇಲೆ ಪ್ರತಿ ವರ್ಷ ಆಟೋ ಪ್ರಯಾಣ ದರ ಏರಿಸುತ್ತಾ.? ಸದ್ಯ ಬೆಂಗಳೂರಿನಲ್ಲಿ ಪ್ರತಿ 1ಕಿ ಮೀಟರ್ ಆಟೋ ಪ್ರಯಾಣ ದರ 15 ರೂ ಇದೆ.ಬೆಂಗಳೂರಿನಲ್ಲಿ 2013 ಹಾಗೂ 2021 ರಲ್ಲಿ ಮಾತ್ರ ಆಟೋ ಪ್ರಯಾಣದ ದರ ಪರಿಷ್ಕರಣೆಯಾಗಿತ್ತು.ಇದೀಗ ಮತ್ತೆ ಪ್ರತಿ ವರ್ಷವೂ ಆಟೋ ಪ್ರಯಾಣದ ದರ ಏರಿಸುವಂತೆ ಒತ್ತಡವಿದ್ದು,ಆಟೋ ಚಾಲಕರಿಗೆ ನಷ್ಟದ ಹಿನ್ನೆಲೆ ದರ ಹೆಚ್ಚುವಂತೆ ಒತ್ತಾಯ ಮಾಡಲಾಗಿದೆ.