Select Your Language

Notifications

webdunia
webdunia
webdunia
webdunia

ಬೃಹತ್ ಗಾತ್ರದ ಗುಂಡಿ; ಅಧಿಕಾರಿಗಳ ನಿರ್ಲಕ್ಷ್ಯ

ಬೃಹತ್ ಗಾತ್ರದ ಗುಂಡಿ; ಅಧಿಕಾರಿಗಳ ನಿರ್ಲಕ್ಷ್ಯ
ಶಿವಮೊಗ್ಗ , ಸೋಮವಾರ, 20 ನವೆಂಬರ್ 2023 (19:23 IST)
ಶಿವಮೊಗ್ಗದ ಸಾಗರ ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷಗಳ ಹಿಂದೆ ಯುಜಿಡಿ ಕಾಮಗಾರಿ ನಡೆಸಲಾಗಿತ್ತು ಅದೇ ರೀತಿ 30ನೇ ವಾರ್ಡಿನಲ್ಲೂ ಕೂಡ ಯುಜಿಡಿ ಗುಂಡಿ ಕಾಮಗಾರಿ ನಡೆಸಲಾಗಿದ್ದು , ಈಗ ಯುಜಿಡಿ ಗುಂಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಕಳೆದ 15 ದಿನಗಳ ಹಿಂದೆ ರಸ್ತೆಯ ಮಧ್ಯಭಾಗದಲ್ಲಿ ಇರುವ ಯುಜಿಡಿ ಗುಂಡಿಯ ಮುಚ್ಚಳ ಮುರಿದು ಹೋಗಿದ್ದು ಬೃಹತ್ ಗಾತ್ರದ ಗುಂಡಿ ಒಂದು ಬಿದ್ದಿದೆ , ಸ್ಥಳೀಯರು ತಕ್ಷಣ ಸ್ಥಳಿಯ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಸಹ ಯಾವುದೇ ಪ್ರಯೋಜನ ಆಗದೆ ಇರುವ ಕಾರಣದಿಂದ ಸ್ಥಳೀಯರು ಗುಂಡಿಯ ಮೇಲೆ ತೆಂಗಿನ ಮರದ ತುಂಡು ಇಟ್ಟು ಅಧಿಕಾರಿಗಳ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಗುಂಡಿಯ ಸುತ್ತಲೂ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಪುಟಾಣಿ ಮಕ್ಕಳಿಗೆ ಅಕ್ಕ ಪಕ್ಕದ ವೃದ್ಧರಿಗೆ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿದೆ. ತಕ್ಷಣವೇ ಈ ಗುಂಡಿಯನ್ನು ಮುಚ್ಚದೆ ಹೋದಲ್ಲಿ, ಮುಂದಿನ ದಿನ ಈ ರಸ್ತೆಯಲ್ಲಿ ದೊಡ್ಡ ಅನಾಹುತ ಆಗುವುದು ಸುಳ್ಳಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಇತ್ತ ಗಮನಹರಿಸಿ, ಆದಷ್ಟು ಬೇಗ ಸಮಸ್ಯೆಯನ್ನು ಸರಿಪಡಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಸ್ಥಳಿಯರು, ರಸ್ತೆ ತಡೆ ನಡೆಸಿ, ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಹೆಚ್ಚುತ್ತಲೇ ಇದೆ ವಾಯುಮಾಲಿನ್ಯ