Publish Date: Wed, 13 Dec 2023 (15:00 IST)
Updated Date: Wed, 13 Dec 2023 (15:06 IST)
ನಗರದಲ್ಲಿ ಮತ್ತೆ ಕಳಪೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.ನಿನ್ನೆ ಹಲಸೂರಿನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಗುಂಡಿಬಿದ್ದ ಜಾಗದಲ್ಲಿ ಪೂಜೆ ಮಾಡಲಾಗಿದೆ.
ರಸ್ತೆ ಕುಸಿದ ಜಾಗದಲ್ಲಿ ಹೂ,ಹಣ್ಣು, ಇಟ್ಟು ಗಂಧದಗಡ್ಡಿ ಪೂಜೆ ಮಾಡಿ ರಸ್ತೆಗೆ ಹಾಲಿನ ಅಭಿಷೇಕ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ.ರಸ್ತೆ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ, ಬ್ರಾಂಡ್ ಬೆಂಗಳೂರು, ಸ್ಥಳೀಯ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಕಿಡಿಕಾರಿದ್ದಾರೆ.
ಬೆಂಗಳೂರಿನ ವೈಟ್ ಟಾಪಿಂಗ್ ರಸ್ತೆಗಳ ಕ್ವಾಲಿಟಿ ಬಗ್ಗೆ ತನಿಖೆಯಾಗಬೇಕು .ಬೆಂಗಳೂರಿನ ರಸ್ತೆಗಳ ಗುಣಮಟ್ಟದ ತನಿಖೆ ಮಾಡಬೇಕು .ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ .ಎಲ್ಲಾ ರಸ್ತೆಗಳ ಬಗ್ಗೆ ತನಿಖೆಗೆ ಆಗ್ರಹಿಸುತ್ತೇವೆ ಎಂದು ಆಪ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದ್ದಾರೆ.