Select Your Language

Notifications

webdunia
webdunia
webdunia
webdunia

ಸೆಪ್ಟೆಂಬರ್ 9 ರಂದು 9 ನೇ ಬಸವ ಪಂಚಮಿ ಸಂಭ್ರಮ

ಸೆಪ್ಟೆಂಬರ್ 9 ರಂದು 9 ನೇ ಬಸವ ಪಂಚಮಿ ಸಂಭ್ರಮ
ವಿಜಯಪುರ , ಗುರುವಾರ, 6 ಸೆಪ್ಟಂಬರ್ 2018 (15:45 IST)
ಕೂಡಲಸಂಗಮದಲ್ಲಿ ಸೆಪ್ಟೆಂಬರ್ 9 ರಂದು 9 ನೇ ಬಸವ ಪಂಚಮಿ ಕಾರ್ಯಕ್ರಮ ಅದ್ಧೂರಿಯಿಂದ ನಡೆಯಲಿದೆ.

ವಿಜಯಪುರದಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ್ದಾರೆ. ಅಂದು ಸಾಮೂಹಿಕ ಇಷ್ಟಲಿಂಗ ಮಾಹಾಪೂಜೆ ಹಾಗೂ ದೀಕ್ಷಾ ಅಭಿಯಾನ ನಡೆಸಲಾಗುವುದು. ಸಾವಿರಾರು ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಗುವುದು. ಇದೇ ವೇಳೆ ಸಮಾಜದ ನೂತನ ಶಾಸಕರುಗಳಿಗೆ ಅಭಿನಂದನೆ ಸಲ್ಲಿಸಲಾಗುವುದು. ಸರ್ ಸಿದ್ದಪ್ಪ ಕಂಬಳಿ ರಾಜ್ಯ ಮಟ್ಟದ ಪಂಚಮಸಾಲಿ ವಿದ್ಯಾರ್ಥಿ ಪುರಸ್ಕಾರ ಮಾಡಲಾಗುವುದು ಎಂದರು.


ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿರಂತರವಾಗಿದೆ. ಈಗಾಗಲೇ ಲಿಂಗಾಯತ ಹೋರಾಟ ಒಂದು ಹಂತ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣನವರ ಮೇಲೆ ಅಭಿಮಾನ ಹೊಂದಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕಳುಹಿಸಿದ ಮನವಿಯನ್ನು ಪುರಸ್ಕಾರ ಮಾಡುತ್ತಾರೆ ಎಂಬ ನಂಬಿಕೆ ಇದೆ.

ಒಂದು ವೇಳೆ ಮಾಡದಿದ್ರೆ ಲೋಕಸಭೆ ಚುನಾವಣೆಗೂ ಮುನ್ನ ನಾವೇ ಕೇಂದ್ರಕ್ಕೆ ಹೋಗಲಿದ್ದೇವೆ. ಪ್ರಧಾನಿ ಅವರಿಂದ ಒಂದು ದಿನಾಂಕ ಪಡೆದು ಅವರನ್ನು ಭೇಟಿಯಾಗಿ ಲಿಂಗಾಯತ ಧರ್ಮದ ಬಗ್ಗೆ ಮತ್ತಷ್ಟು ಮನವರಿಕೆ ಮಾಡಲಿದ್ದೇವೆ ಎಂದರು.

ಲಿಂಗಾಯತ ಹೋರಾಟದಲ್ಲಿ ಭಾಗವಹಿಸಿದವರು ಎಂ ಎಲ್ ಎ ಚುನಾವಣೆಯಲ್ಲಿ ಸೋತ ವಿಚಾರಕ್ಕೆ ಮಾತನಾಡಿದ ಅವರು, ಲಿಂಗಾಯತ ಹೋರಾಟಕ್ಕೂ ರಾಜಕೀಯಕ್ಕೂ ಸಂಭಂದವಿಲ್ಲ. ನಮಗೆ ಯಾವುದೇ ಪಕ್ಷಭೇದವಿಲ್ಲ, ಲಿಂಗಾಯತ ಧರ್ಮಕ್ಕೆ ಎಲ್ಲರೂ ಬೆಂಬಲವಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬರಗಾಲವಿರುವುದರಿಂದ ಸಿಎಂ ಅವರು ಇಲ್ಲಿಗೆ ಬಂದು ಭೇಟಿ ಮಾಡಬೇಕಿದೆ. ಕುಮಾರಸ್ವಾಮಿ ಅವರು ಇಲ್ಲಿನ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರು