Select Your Language

Notifications

webdunia
webdunia
webdunia
webdunia

74 ನೇ ಗಣರಾಜ್ಯೋತ್ಸವದ ಸಡಗರ ಸಂಭ್ರಮ..!

74 ನೇ  ಗಣರಾಜ್ಯೋತ್ಸವದ ಸಡಗರ ಸಂಭ್ರಮ..!
bangalore , ಗುರುವಾರ, 26 ಜನವರಿ 2023 (18:05 IST)
ರಾಜ್ಯ ರಾಜಧಾನಿ ಬೆಂಗಳೂರಲ್ಲಿ 74 ನೇ ಗಣರಾಜ್ಯೋತ್ಸವ ಆಚರಣೆ ನಗರದ ಮಾಣಿಕ್ ಪೆರೇಡ್ ಮೈದಾನನದಲ್ಲಿ ಅದ್ದೂರಿಯಾಗಿ ನಡೆಯಿತು. ಗಣರಾಜ್ಯೋತ್ಸವದ ಅಂಗವಾಗಿ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜೊತೆ  ಸಿಎಂ ಬಸವರಾಜ್ ಬೊಮ್ಮಾಯಿ ಹಾಜರಿದ್ರು. ಧ್ವಜಾರೋಹಣ ಮಾಡಿದ ನಂತರ  ರಾಜ್ಯದ ಜನರಿಗೆ ಸುಮಾರು 21 ನಿಮಿಷಗಳ ಕಾಲ ಗಣರಾಜ್ಯೋತ್ಸವದ ಸಂದೇಶ ನೀಡಿದ್ರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್. ಇವತ್ತಿನ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸೈನಿಕರ ಬೈಕ್ ಮೇಲಿನ ಸಾಹಸ ಪ್ರದರ್ಶನಗಳು ಎಲ್ಲರನ್ನ ಆಕರ್ಷಿಸಿತ್ತು.
74 ನೇ ಗಣರಾಜ್ಯೋತ್ಸವ ಇಂದು ದೇಶದಾದ್ಯಂತ ಅದ್ದೂರಿಯಾಗಿ ನೆರವೇರಿದೆ. ನಗರದ ಮಾಣಿಕ್ ಶಾ ಪೆರೆಡ್ ಮೈದಾನದಲ್ಲಿ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರು‌ ಧ್ವಜಾರೋಹಣ ಮಾಡಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ರು. ಮಾಣಿಕ್ ಷಾ ಪೆರೆಡ್ ಮೈದಾ‌ನಕ್ಕೆ ಬೆಳಿಗ್ಗೆ 8.55ಕ್ಕೆ ರಾಜ್ಯಪಾಲರ  ಜೊತೆಯಲ್ಲೇ ಸಿಎಂ ಬೊಮ್ಮಾಯಿ ಆಗಮಿಸಿ 9 ಗಂಟೆಗೆ  ರಾಜ್ಯಪಾಲರಿಂದ ಧ್ವಜಾರೋಹಣ ಆದ ನಂತ್ರ ರಾಷ್ಟ್ರಗೀತೆ, ಪೊಲೀಸ್ ಬ್ಯಾಂಡ್ ತಂಡದಿಂದ ಗೌರವ ರಕ್ಷೆ ಸ್ವೀಕಾರಿಸಿ,‌ಪೆರೇಡ್ ವೀಕ್ಷಣೆ ಮಾಡುದ್ರು ರಾಜ್ಯಪಾಲರು. 
74ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸರ್ಕಾರದ ಸಾಧನೆಗಳ ಬಗ್ಗೆ ಸುಮಾರು 21 ನಿಮಿಷಗಳ ಕಾಲ‌ ಭಾಷಣ ಮಾಡುದ್ರು. ಕನ್ನಡದಲ್ಲಿ ಶುಭಾಷಯಗಳನ್ನ ತಿಳಿಸಿದ ರಾಜ್ಯಪಾಲರು  ಕರ್ನಾಟಕದ ಜನತೆಗೆ ಅಭಿನಂದನೆಗಳನ್ನ ತಿಳಿಸಿದ್ರು. ಈ ದಿನ ನಮ್ಮ ದೇಶದ ಅಭಿವೃದ್ಧಿಗಾಗಿ ಕಠಿಣ ಪರಿಶ್ರಮಪಡುತ್ತೇವೆಂಬ ನಮ್ಮ ಬದ್ಧತೆಯನ್ನು ಪುನ‌‍ ದೃಢೀಕರಿಸುವ ಸುಸಂದರ್ಭವಾಗಿದೆ. ವಿಶೇಷವಾಗಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವು 75 ವರ್ಷಗಳ ಪಗತಿಪರ ಭಾರತ ಮತ್ತು ಇಲ್ಲಿನ ಜನರು, ಸಂಸ್ಕೃತಿ ಹಾಗೂ ಸಾಧನೆಗಳ ವೈಭವದ ಇತಿಹಾಸವನ್ನು ಸ್ಮರಿಸಲು ಸಂಭ್ರಮಿಸಲು ಭಾರತ ಸರ್ಕಾರವು ಕೈಗೊಂಡಿರುವ ಒಂದು ಉಪಕ್ರಮವಾಗಿದೆ ಎಂದು ತಿಳಿಸಿದ್ರು 
 ಇನ್ನೂ ರಾಜ್ಯಪಾಲರ ಭಾಷಣದ ನಂತ್ರ ಶಾಲಾ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು ಸುನೀತ ಮತ್ತು ತಂಡದಿಂದ ನಾಡಗೀತೆ ಮತ್ತು ರೈತಗೀತೆ ಹಾಗೂ  ಮಹಾನಾಯಕ ಡಾ. ಬಿ ಆರ್ ಅಂಬೇಡ್ಕರ್ ಅವರ ಹಾಡಿಗೆ ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ 750 ವಿದ್ಯಾರ್ಥಿಗಳಿಂದ ನೃತ್ಯ ಎಲ್ಲರ ಮನಸೆಳೆಯಿತು.  ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮಾಗಡಿ ರಸ್ತೆ ಮತ್ತು ಬಿಬಿಎಂಪಿ ಪ್ರೌಢ ಶಾಲೆ ವಿಜಯನಗರದ 650 ವಿದ್ಯಾರ್ಥಿಗಳಿಂದ ನಮ್ಮ ಭಾರತ ಭಾಗ್ಯವಿಧಾತ ರೈತ ಎಂಬ ಹಾಡಿಗೆ ನೃತ್ಯ.ಭಾರತಾಂಬೆ ನಿನ್ನ ಜನ್ಮ ದಿನ ಎಂಬ ಹಾಡಿಗೆ ಸರಿ ಶಾಲೆ ಲಗ್ಗೆರೆ, ವಿಷ್ಣು ಇಂಟರ್ ನ್ಯಾಷನಲ್ ಸ್ಕೂಲ್ 600 ವಿದ್ಯಾರ್ಥಿಗಳಿಂದ ನೃತ್ಯ ಎಲ್ಲರ ಮೆಚ್ಚುಗೆ ಪಾತ್ರವಾಯ್ತು. ಇನ್ನೂ ಕಲರಿ ಪೈಟು ಬೆಂಗಳೂರಿನ ಎಂ ಇ ಜಿ ಅಂಡ್ ಅವರ ಕಲರಿ ಪೈಟು ಪ್ರದರ್ಶನ ಹಾಗೂ ಯೋಧರ ಎಎಸ್ ಸಿ  ಟೋನಾರ್ಡಸ್ ಬೆಂಗಳೂರಿನ ದಿ ಆರ್ಮಿ ಸರ್ವಿಸ್ ಕ್ರಾರ್ಪಸ್ ಅವರಿಂದ ಬೈಕ್ ಮೇಲೆ ಸಾಹಸ ಪ್ರದರ್ಶನ ರೋಮಾಂಚನಗೊಳಿಸಿತ.21 ನಿಮಿಷಗಳ ಕಾಲ ಭಾಷಣ ಮಾಡಿದ ರಾಜ್ಯಪಾಲರು. ತಮ್ಮ ಭಾಷಣದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಹೆಚ್ಚು ಗಮನ ನೀಡಿದ್ರು. ಸರ್ಕಾರದ ವಿವಿಧ ಯೋಜನೆಳ ಅನುಷ್ಠಾನದ ಬಗ್ಗೆ ಹೆಚ್ಚು ಗಮನ ನೀಡಿದ್ರು ರಾಜ್ಯಪಾಲರು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳ ನೃತ್ಯ ಯೋಧರ ಬೈಕ್ ಸಾಹಸ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ 74 ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು ತಂದಿತು.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಪ್ರಥಮ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ