Select Your Language

Notifications

webdunia
webdunia
webdunia
webdunia

ಶಸ್ತ್ರಸ್ತ್ರಕ್ಕೆ ಗುಡ್‌ಬೈ ಹೇಳಿದ 6 ನಕ್ಸಲರು: ಸಿಎಂ ಮುಂದೆ ಮಂಡಿಯೂರಿದ ಸನ್ನಿವೇಶ ಹೇಗಿತ್ತು ಗೊತ್ತಾ

Karnataka Naxals Surrender, Chief Minister Siddaramaiah, Karnataka naxals Encounter

Sampriya

ಬೆಂಗಳೂರು , ಬುಧವಾರ, 8 ಜನವರಿ 2025 (18:56 IST)
Photo Courtesy X
ಬೆಂಗಳೂರು: ಹಲವು ದಶಕಗಳಿಂದ ಭೂಗತರಾಗಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ 6 ಮಂದಿ ನಕ್ಸಲರು ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗತರಾಗಿದ್ದಾರೆ.

ಮುಖ್ಯವಾಹಿನಿಗೆ ಬರಲು ಸಜ್ಜಾಗಿ, ಸಿಎಂ ಮುಂದೆ ಶರಣಾದ ನಕ್ಸಲರು ಇವರೇ. ಸಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ವಸಂತ್, ಜಿಶಾ ಶರಣಾದ ನಕ್ಸಲರು.

ಪೊಲೀಸ್ ಭದ್ರತೆಯೊಂದಿಗೆ ನಕ್ಸಲರನ್ನು ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಗೆ ಸಂಜೆ ಹೊತ್ತಿಗೆ ಕರೆತರಲಾಯಿತು. ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ನಕ್ಸಲರು ಭೇಟಿಯಾದರು. ಈ ವೇಳೆ ನಕ್ಸಲರ ಜೊತೆ ಸಿಎಂ ಮಾತುಕತೆ ನಡೆಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಡಿಜಿಪಿ ಅಲೋಕ್ ಮೋಹನ್ ಸಮ್ಮುಖದಲ್ಲಿ ನಕ್ಸಲರು ಸಿಎಂ ಮುಂದೆ ಶರಣಾಗತಿ ಪ್ರಕ್ರಿಯೆ ನಡೆಯಿತು. ಶಸ್ತ್ರ ತ್ಯಜಿಸಿ  6 ಮಂದಿ ನಕ್ಸಲರು ಶರಣಾದರು. ಈ ವೇಳೆ ನಕ್ಸಲರ ಜೊತೆ ಅವರ ಕುಟುಂಬಸ್ಥರು ಸಹ ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ- ಸಿದ್ದರಾಮಯ್ಯ ಬಣದ ನಡುವಿನ ಸಿಎಂ ಕುರ್ಚಿ ಪೈಪೋಟಿಯಲ್ಲಿ ರಾಜ್ಯದ ಅಭಿವೃದ್ಧಿಯಿಲ್ಲ: ಅಶೋಕ್ ವ್ಯಂಗ್ಯ