Select Your Language

Notifications

webdunia
webdunia
webdunia
webdunia

ಸರ್ಕಾರದಿಂದ ಜನರಿಗೆ ಚೊಂಬು, ನಕ್ಸಲರಿಗೆ ಲಕ್ಷ ಲಕ್ಷ ಪ್ಯಾಕೇಜ್: ಸುನಿಲ್ ಕುಮಾರ್

Karnataka Police

Sampriya

ಬೆಂಗಳೂರು , ಬುಧವಾರ, 8 ಜನವರಿ 2025 (14:11 IST)
Photo Courtesy X
ಬೆಂಗಳೂರು: ನಕ್ಸಲರ ಶರಣಾಗತಿ ಪ್ಯಾಕೇಜ್‌ಗೆ ಮಾಜಿ ಸಚಿವ ಸುನಿಲ್‌ ಕುಮಾರ್‌ ಕಿಡಿಕಾರಿದ್ದಾರೆ. ಇದು ನಕ್ಸಲರ ಶರಣಾಗತಿ ಅಲ್ಲ. ಕಾಡು ನಕ್ಸಲರನ್ನು ನಾಡು ನಕ್ಸಲರನ್ನಾಗಿ ಮಾಡುವ ಪ್ಯಾಕೇಜ್ ಇದು ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮೇಶ್ವರ ಕಫೆಗೆ ಬಾಂಬ್ ಇಟ್ಟವರನ್ನು ಹಾಗೂ ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಟ್ಟವರನ್ನ ಶರಣಾಗತಿ ಆದರೆ ಬಿಡ್ತಾರಾ? ಶರಣಾಗತಿಗೂ ಮೊದಲೇ ಎ, ಬಿ, ಸಿ ಎಂದು ಪ್ಯಾಕೇಜ್ ಘೋಷಣೆ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯನವರ ಮನೆಯಲ್ಲೇ ಶರಣಾಗತಿ ಆಗುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ದುರಂತ ಯಾವುದು ಇಲ್ಲ ಎಂದು ಹೇಳಿದರು.

ನಕ್ಸಲ್ ಚಿಂತನೆಗೆ ಬೆಂಬಲ ಸಿಗದೇ ಇದ್ದಾಗ ಸಿದ್ದರಾಮಯ್ಯ ಸರ್ಕಾರ ಪ್ಯಾಕೇಜ್‌ ಆಸೆಯ ಚಿಗುರು ಹೊರಡಿಸಿದೆ. ಹಣವನ್ನು ನೀಡಿ ಶರಣಾಗತಿ ಮಾಡಿಸುವುದನ್ನು ನಾವು ವಿರೋಧಿಸುತ್ತೇವೆ. ಬಡವರಿಗೆ ನೆರವು ಕೊಡದೇ ಬಂದೂಕುಗಳು ಹಿಡಿದವರಿಗೆ ನೆರವು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇವರು ನಗರಕ್ಕೆ ಬಂದ ನಂತರ ಕಾಡಿಗೆ ಕಳುಹಿಸಿ ಕೊಡುವ ಕೆಲಸ ಆಗಲಿದೆ. ಶಾಂತಿಗಾಗಿ ನಾಗರೀಕ ವೇದಿಕೆ ಮುಂದೆ ಶರಣಾಗತಿ ಆಗುವುದು ಬೇಡ. ನ್ಯಾಯಾಲಯದ ಮುಂದೆ ಶರಣಾಗಲಿ ಎಂದರು.

ಹಲವು ವರ್ಷಗಳಿಂದ ನಕ್ಸಲ್ ವಿರುದ್ಧ ಹೋರಾಡಿದ ನಕ್ಸಲ್‌ ನಿಗ್ರಹ ಪಡೆಯ ನೈತಿಕ ಸ್ಥೈರ್ಯ ಕಳೆದುಕೊಳ್ಳುವ ಸಂದರ್ಭ ಇದು. ವಿಕ್ರಮ್ ಗೌಡ  ಎನ್‌ಕೌಂಟರ್‌ ಆಗುತ್ತಿದ್ದಂತೆ ತನಿಖೆ ಆಗಬೇಕು ಅಂತಾರೆ. ಶರಣಾಗತಿ ಆಗುವುದಾದರೆ ನ್ಯಾಯಾಲಯದಲ್ಲಿ ಶರಣಾಗಲಿ. ಐದು ವರ್ಷಗಳಲ್ಲಿ ಬಿಡುಗಡೆ ಆಗಿರುವ ನಕ್ಸಲರ ಚಟುವಟಿಕೆಗಳನ್ನು ಬಿಡುಗಡೆ ಮಾಡಿ ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜಾತ್ರೆಯಲ್ಲಿ ರೊಚ್ಚಿಗೆದ್ದ ಆನೆ ಮನುಷ್ಯರನ್ನೇ ಎತ್ತಿ ಬಿಸಾಕಿತು: ಭಯಾನಕ ವಿಡಿಯೋ ಇಲ್ಲಿದೆ