Select Your Language

Notifications

webdunia
webdunia
webdunia
webdunia

ಶಿಕ್ಷಣದಿಂದ 5 ಸಾವಿರ ಮಕ್ಕಳು ಡ್ರಾಪ್​ಔಟ್​!

webdunia
bangalore , ಶನಿವಾರ, 20 ಆಗಸ್ಟ್ 2022 (14:00 IST)
ಕೊರೋನಾ ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಹೊಡೆತ ಕೊಟ್ಟಿತ್ತು. ಈಗ ಕೊರೋನಾ ಎಫೆಕ್ಟ್ ಕಡಿಮೆ ಆಗುತ್ತಲೇ ಅದರ ಪರಿಣಾಮಗಳು ಶಿಕ್ಷಣ ಕ್ಷೇತ್ರದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತಿವೆ. ಕೊರೊನಾದಿಂದಾಗಿ ರಾಜ್ಯದಲ್ಲಿ ಸಾವಿರಾರು ಮಕ್ಕಳು ಶಾಲೆಯಿಂದ ದೂರ ಉಳಿದಿರುವ ಆಘಾತಕಾರಿ ಅಂಶ ಈಗ ಬಯಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಆಪರೇಷನ್ ಡ್ರಾಪ್ ಔಟ್ ಚಿಲ್ಡ್ರನ್ಸ್ ಅಭಿಯಾನ ಪ್ರಾರಂಭ ಮಾಡಿದೆ. ಮಕ್ಕಳನ್ನ ಶಾಲೆಗೆ ವಾಪಸ್ ಕರೆತರಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಿಶೇಷ ಟಾಸ್ಕ್ ನೀಡಲಾಗಿದೆ. ಈ ವರ್ಷ 24,308 ವಿದ್ಯಾರ್ಥಿಗಳು ಶಾಲೆಯಿಂದ ಡ್ರಾಪ್ ಔಟ್ ಆಗಿದ್ದಾರೆ. ಈವರೆಗೂ 18,584 ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಪತ್ತೆಹಚ್ಚಿದೆ. ಇನ್ನು 5,724 ವಿದ್ಯಾರ್ಥಿಗಳ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಇಲ್ಲ.14,871 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಮರು ಸೇರ್ಪಡೆ ಆಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 9437 ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದಾರೆ. ಇದೀಗ ಮಕ್ಕಳ ಡ್ರಾಪ್ ಔಟ್ ವಿಚಾರ ಶಿಕ್ಷಣ ಇಲಾಖೆಗೆ ದೊಡ್ಡ ತಲೆ ನೋವು ತಂದಿದ್ದು, ಮಕ್ಕಳ ಪತ್ತೆಗೆ ಡಿಡಿಪಿಐಗಳು, ಬಿಇಓಗಳು & ಶಿಕ್ಷಕರಿಗೆ ಸೂಚನೆ ನೀಡಲಾಗಿದೆ .

Share this Story:

Follow Webdunia kannada

ಮುಂದಿನ ಸುದ್ದಿ

ಮೋಟಾರ್ಸ್‌ ಪ್ಲ್ಯಾಂಟ್‌ ಖರೀದಿಸಲಿದೆ ಮಹೀಂದ್ರಾ