Select Your Language

Notifications

webdunia
webdunia
webdunia
webdunia

20 ರ ಯುವತಿ ಜೊತೆಗೆ 40 ವರ್ಷದ ಸ್ವಾಮೀಜಿ ನಾಪತ್ತೆ

20 ರ ಯುವತಿ ಜೊತೆಗೆ 40 ವರ್ಷದ ಸ್ವಾಮೀಜಿ ನಾಪತ್ತೆ
ಕೋಲಾರ , ಗುರುವಾರ, 27 ಫೆಬ್ರವರಿ 2020 (21:25 IST)
ರಾಜ್ಯದಲ್ಲಿ ಮತ್ತೊಬ್ಬ ಸ್ವಾಮೀಜಿ ಇದೀಗ ತೀವ್ರ ಚರ್ಚೆಗೆ ಗುರಿಯಾಗಿದ್ದಾರೆ. 20 ವರ್ಷದ ಯುವತಿಯೊಂದಿಗೆ 40 ವರ್ಷದ ಸ್ವಾಮೀಜಿಯೊಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪಾದ ಪೂಜೆ ಹಾಗೂ ಸಹಾಯ ಮಾಡಲು ಬರುತ್ತಿದ್ದ 20 ವರ್ಷದ ಯುವತಿಯನ್ನು ಕೋಲಾರದ ಹೊಳಲಿಯ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿ ಕರೆದುಕೊಂಡು ನಾಪತ್ತೆಯಾಗಿದ್ದಾರೆ.

ಗ್ರಾಮವನ್ನು ಹಾಗೂ ಮಠವನ್ನು ಅಭಿವೃದ್ಧಿ ಮಾಡುವೆ ಅಂತ ಹೇಳಿದ್ದ ಸ್ವಾಮೀಜಿ ಇದೀಗ ಯುವತಿಯೊಂದಿಗೆ ಪರಾರಿಯಾಗಿದ್ದು, ಹಲವು ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಯುವತಿಯ ಸೋದರ ಮಾವ ಶಂಕರ್ ಎಂಬಾತ ದೂರು ನೀಡಿದ್ದಾರೆ. ಸ್ವಾಮೀಜಿಯು ಯುವತಿಯನ್ನು ಮದುವೆ ಆಗಿರೋದಾಗಿ ಯುವತಿಯ ಸಹೋದರನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೇಲುಕೋಟೆಯಲ್ಲಿ ಶ್ರೀ ವೈರಮುಡಿ ಕಿರೀಟ ಧಾರಣ ಮಹೋತ್ಸವ : ಸಿದ್ಧತೆ ಶುರು