Publish Date: Sat, 02 Sep 2023 (21:00 IST)
Updated Date: Sat, 02 Sep 2023 (17:31 IST)
ಪಾಕಿಸ್ತಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಲೀಟರ್ಗೆ 300 ರೂಪಾಯಿ ಗಡಿ ದಾಟಿದೆ.. ಒಂದರ ಹಿಂದೆ ಒಂದೊಂದೇ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಇದೀಗ ಲೀಟರ್ ಪೆಟ್ರೋಲ್ ಬೆಲೆಯನ್ನು 14.91 ರೂಪಾಯಿ ಹೆಚ್ಚಳ ಮಾಡಿದ್ದು, ಹೈಸ್ಪೀಡ್ ಡೀಸೆಲ್ ಬೆಲೆಯನ್ನು 18.44 ರೂಪಾಯಿ ಏರಿಕೆ ಮಾಡಿರುವುದಾಗಿ ಪಾಕ್ ವಿತ್ತ ಸಚಿವಾಲಯ ತಿಳಿಸಿದೆ. ಬೆಲೆ ಏರಿಕೆಯೊಂದಿಗೆ ಪಾಕಿಸ್ತಾನದಲ್ಲೀಗ ಪೆಟ್ರೋಲ್ ಬೆಲೆ ಲೀಟರ್ಗೆ 305.36 ರೂಪಾಯಿಯಾಗಿದ್ದು, ಡೀಸೆಲ್ ಬೆಲೆ ಲೀಟರ್ಗೆ 311.84 ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.