Select Your Language

Notifications

webdunia
webdunia
webdunia
webdunia

ಗಾರ್ಮೆಂಟ್ ಕಾರ್ಖಾನೆ ಉದ್ಯೋಗಿ ಯುವತಿಯ ಮೇಲೆ ಗ್ಯಾಂಗ್‌ರೇಪ್

ಗಾರ್ಮೆಂಟ್ ಕಾರ್ಖಾನೆ ಉದ್ಯೋಗಿ ಯುವತಿಯ ಮೇಲೆ ಗ್ಯಾಂಗ್‌ರೇಪ್
ಬೆಂಗಳೂರು , ಸೋಮವಾರ, 27 ನವೆಂಬರ್ 2017 (19:15 IST)
ಗಾರ್ಮೆಂಟ್ ಫ್ಯಾಕ್ಟರಿ ಉದ್ಯೋಗಿಯಾಗಿರುವ  24 ವರ್ಷ ವಯಸ್ಸಿನ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 
ಮದನಾಯಕನಹಳ್ಳಿ ಪೊಲೀಸರ ಪ್ರಕಾರ, ಆರೋಪಿಗಳಾದ ರಾಘವೇಂದ್ರ, ಪುನೀತ್, ವೆಂಕಟೇಶ್ ಮತ್ತು ವಿಜಯ್ ಎನ್ನುವವರು ನವೆಂಬರ್ 16 ರಂದು ಮಹಿಳೆಯ ಪತಿಯನ್ನು ಭೇಟಿ ಮಾಡಲು ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಪತಿ ಇಲ್ಲದಿರುವುದು ಕಂಡ ಆರೋಪಿಗಳು ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ.
 
ಆರೋಪಿಗಳ ವರ್ತನೆಯಿಂದ ಆಘಾತಗೊಂಡ ಮಹಿಳೆ ವಿಷಯವನ್ನು ಯಾರಿಗೂ ಹೇಳದೆ ರಹಸ್ಯವಾಗಿಟ್ಟಿದ್ದಾಳೆ. ಆದರೆ, ಕೆಲ ದಿನಗಳು ಕಳೆದರೂ ಪತಿ ಬಾರದಿರುವುದು ಕಂಡು ಪೊಲೀಸರನ್ನು ಸಂಪರ್ಕಿಸುವ ಧೈರ್ಯ ಮಾಡಿದ್ದಾಳೆ. 
 
ಪೊಲೀಸರು ಮಹಿಳೆಯ ವಿಚಾರಣೆ ನಡೆಸಿದಾಗ ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿರುವುದು ಬಹಿರಂಗವಾಗಿದೆ. ಆದರೆ, ಸಮಾಜದಲ್ಲಿ ತಲೆ ತಗ್ಗಿಸುವಂತಾಗುತ್ತದೆ ಎನ್ನುವ ಕಾರಣಕ್ಕೆ ಅತ್ಯಾಚಾರದ ದೂರು ದಾಖಲಿಸಲು ಹಿಂದೇಟು ಹಾಕಿದ್ದಾಳೆ.
 
ಆದರೆ, ಪೊಲೀಸರ ಮನವೊಲಿಕೆಯಿಂದ ಕೊನೆಗೂ ಮಹಿಳೆ, ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿ ರಾಘವೇಂದ್ರ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ವಿಜಯ್ ಪರಾರಿಯಾಗಿದ್ದು ಆತನ ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚಹಾ ಮಾರಿದ್ದೇನೆ, ದೇಶವನ್ನು ಮಾರಾಟ ಮಾಡಿಲ್ಲ: ವಿಪಕ್ಷಗಳಿಗೆ ಮೋದಿ ತಿರುಗೇಟು