Select Your Language

Notifications

webdunia
webdunia
webdunia
Friday, 11 April 2025
webdunia

2000 ಮುಖಬೆಲೆಯ ಕೋಟ್ಯಂತರ ಮೌಲ್ಯದ ನಕಲಿ ನೋಟು ಪತ್ತೆ

ಖೋಟಾ ನೋಟು
ಚಾಮರಾಜನಗರ , ಶನಿವಾರ, 17 ಆಗಸ್ಟ್ 2019 (16:22 IST)
ಎರಡು ಸಾವಿರ ರೂಪಾಯಿ ಮುಖ ಬೆಲೆಯ ಸುಮಾರು ಕೋಟ್ಯಂತರ ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮೂರು ಕೋಟಿಗೂ ಹೆಚ್ಚು ಮೌಲ್ಯದ ಖೋಟಾ ನೋಟುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪಿಯನ್ನ ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಚ್.ಡಿ.ಆನಂದ್ ಕುಮಾರ್ ,  15 ದಿನಗಳ ಹಿಂದೆ ಖೋಟಾ ನೋಟು ಸಾಗಾಣೆ ಬಗ್ಗೆ ಮಾಹಿತಿ ಇತ್ತು. ಈ ಮಾಹಿತಿಯನ್ನು ಆಧರಿಸಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಯಿತು.

ಅದರಂತೆ  ಚಾಮರಾಜನಗರ – ಸತ್ಯಮಂಗಲ ರಸ್ತೆಯಲ್ಲಿರುವ ಅಟ್ಟಗೂಳಿಪುರ ಬಳಿ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪುಟ್ಟಸ್ವಾಮಿ ನೇತೃತ್ವದ ಪೊಲೀಸ್ ತಂಡ ಬೊಲೆರೋ ಪಿಕಪ್ ಕ್ಯಾಂಟರ್ ಪರಿಸಿಲಿಸಿದಾಗ ಆ ವಾಹನದಲ್ಲಿ ಎರಡು ಸಾವಿರ ಮುಖ ಬೆಲೆಯ 3.16 ಕೋಟಿ ಮೌಲ್ಯದ ಖೋಟಾ ನೋಟುಗಳು ಪತ್ತೆಯಾಗಿವೆ ಎಂದಿದ್ದಾರೆ.  

ವಾಹನದ ಚಾಲಕನನ್ನು  ಬಂಧಿಸಿ, ಆತನಿಂದ ಎಲ್ಲ ಖೋಟಾ ನೋಟುಗಳನ್ನು ವಶ ಪಡೆದುಕೊಂಡಿದ್ದು, ವಿಚಾರಣೆ ವೇಳೆ ಸರಗೂರು ಪಟ್ಟಣದವನು. ಹೆಸರು ಕಾರ್ತಿಕ್. ನನ್ನನ್ನು ವಾಹನ ಚಾಲನೆಗಾಗಿ ಮಾತ್ರ ಕರೆದುಕೊಂಡು ಬಂದಿದ್ದರು, ಅವರು ಯಾರೆಂದು ಗೊತ್ತಿಲ್ಲ ಎಂದಿದ್ದಾನೆ.

ವಾಹನದಲ್ಲಿ ಖೋಟಾ ನೋಟು ಇದೆ ಎಂಬ ಮಾಹಿತಿಯೂ ನನಗೆ ಗೊತ್ತಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಈ ಖೋಟಾ ನೋಟ್ ಸಾಗಣೆ ಬಗ್ಗೆ ಹೆಚ್ಚಿನ‌ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕೋಗಿಲೆ ತೋಟದಲ್ಲಿ ಸಿಕ್ಕಿತು 200 Kg ಮೊಸಳೆ