Select Your Language

Notifications

webdunia
webdunia
webdunia
webdunia

ಕರಾವಳಿಯನ್ನೇ ಬೆಚ್ಚಿಬೀಸಿದ್ಧ ವಿಮಾನ ದುರಂತದ ಕರಾಳ ಘಟನೆಗೆ 15 ವರ್ಷ: ಜಿಲ್ಲಾಡಳಿತದಿಂದ ಗೌರವ ಸಲ್ಲಿಕೆ

15 years since Mangalore plane crash, Air India Express plane, Dakshina Kannada district administration

Sampriya

ಮಂಗಳೂರು , ಗುರುವಾರ, 22 ಮೇ 2025 (14:37 IST)
Photo Courtesy X
ಮಂಗಳೂರು: 2010ರ ಮೇ 22ರಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ಈಗ 15 ವರ್ಷ. ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಈ ದುರ್ಘಟನೆಯಲ್ಲಿ ಮಡಿದವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಇಂದು ಗೌರವ ಸಲ್ಲಿಸಿತು.

ಅಂದು ಬೆಳಗ್ಗೆ 6:20ಕ್ಕೆ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಬಜ್ಪೆ ಕೆಂಜಾರಿನಲ್ಲಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಹಂತದಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 166 ಮಂದಿಯ ಪೈಕಿ 158 ಮಂದಿ ಮೃತಪಟ್ಟಿದ್ದರು.

ಕೆಂಜಾರು ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಲ್ಯಾಂಡ್ ಆಗುವ ಸಂದರ್ಭ ರನ್‌ವೇನಿಂದ ಜಾರಿ ಪ್ರಪಾತಕ್ಕೆ ಉರುಳಿಬಿದ್ದು ದುರಂತಕ್ಕೀಡಾಗಿತ್ತು. ಮೃತದಲ್ಲಿ ಕೇರಳದ ಕಾಸರಗೋಡು, ಕರ್ನಾಟಕದ ದಕ್ಷಿಣ, ಉಡುಪಿ, ಉತ್ತರ ಕನ್ನಡ ಜಿಲ್ಲೆಯವರಿದ್ದರು.

ಪವಾಡಸದೃಶವಾಗಿ ಎಂದು 8 ಮಂದಿ ಬದುಕುಳಿದಿದ್ದರು. ಈ ದುರಂತದಲ್ಲಿ ಮೃತಪಟ್ಟವರಲ್ಲಿ 22 ಮಂದಿಯ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದು, ಅವುಗಳನ್ನು ತಣ್ಣೀರುಬಾವಿ ಬಳಿಯ ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಪಾರ್ಕ್ ನಿರ್ಮಿಸಲಾಗಿದೆ.

ತಣ್ಣೀರುಬಾವಿ ಬಳಿಯ ನಿರ್ಮಿಸಲಾಗಿರುವ ಸ್ಮಾರಕದಲ್ಲಿ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದ.ಕ. ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ್, ಮಂಗಳೂರು ಮನಪಾ ಆಯುಕ್ತ ರವಿಚಂದ್ರ ನಾಯಕ್, ಪಣಂಬೂರು ಎಸಿಪಿ ಕೆ.ಶ್ರೀಕಾಂತ್, ತಹಶಿಲ್ದಾರರ ನವೀನ್ ಕುಮಾರ್ ಉಪಸ್ಥಿತರಿದ್ದು, ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರನ್ಯಾ ರಾವ್ ಗೆ ಪರಮೇಶ್ವರ್ 25 ಲಕ್ಷ ರೂ ಕೊಟ್ಟಿದ್ದಾರೆ: ಒಪ್ಪಿಕೊಂಡ ಡಿಕೆ ಶಿವಕುಮಾರ್