ಸಾರಿಗೆ ನೌಕರರ ಸಂಘಗಳ ವಿರೋಧದ ಮದ್ಯಯೇ ನೌಕರರರ ವೇತನವನ್ನು ಸರ್ಕಾರ ಶೇ 15 ರಷ್ಟು ಹೆಚ್ಚಸಿದೆ . ಈ ವೇತನ ಮಾ.1 ರಿಂದ ಅನ್ವಯ ವಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು,ನಾಲ್ಕು ಸಾರಿಗೆ ನಿಗಮಗಳಿಗೂ ಈ ವೇತನ ಅನ್ವಯವಾಗುವಂತೆ ರಾಜ್ಯ ಸರ್ಕಾರ ತಿಳಿಸಿದೆ,ಇನ್ನು ಸರ್ಕಾರದ ಈ ಆದೇಶಕ್ಕೆ ಸಾರಿಗೆ ನೌಕರರ ಸಂಘಗಳು ವಿರೋದ ವ್ಯಕ್ತಪಡಿಸುತ್ತಿದ್ದು , ವೇತನ ಹೆಚ್ಚಳ ಮಾಡುವುದಷ್ಟೇ ನಮ್ಮ ಬೇಡಿಕೆ ಅಲ್ಲ, ಸಂಘಟನೆಗಳೊಂದಿಗೆ ಯಾವಿದೆ ಚರ್ಚೆ ಮಾಡದೇ ಏಕಪಾಕ್ಷಿಯ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ , ಶೇ.15 ರಷ್ಟು ವೇತನ ನಮಗೆ ತೃಪ್ತಿ ತಂದಿಲ್ಲ , ಯಾವುದೇ ಕಾರಣಕ್ಕೂ ಮಾರ್ಚ್ 21 ರ ಮುಷ್ಕರವನ್ನು ಹಿಂಪದೆಯುವುದಿಲ್ಲ ಎಂದು ಸಾರಿಗೆ ನೌಕರರ ಜಂಟಿಕ್ರಿಯಾ ಸಮಿತಿ ಅದ್ಯಕ್ಷ ಅನಂತ್ ಸುಬ್ಬರಾವ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.