Webdunia - Bharat's app for daily news and videos

Install App

ಚಾಮರಾಜಪೇಟೆ ಜೆಡಿಎಸ್ ಟಿಕೆಟ್ ಗಾಗಿ ಜೆಪಿ ಭವನದಲ್ಲಿ ಹೈಡ್ರಾಮಾ..!

Webdunia
ಭಾನುವಾರ, 19 ಮಾರ್ಚ್ 2023 (14:41 IST)
ರಾಜ್ಯದಲ್ಲಿ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಟಿಕೆಟ್ ಗಾಗಿ ಕಿತ್ತಾಟ ಜೋರಾಗಿದೆ.. ಎಲ್ಲಾ ಪಕ್ಷದಲ್ಲಿ ನಡೆದಂತೆ ಇಂದು ಜೆಡಿಎಸ್ ಕಚೇರಿಯಲ್ಲೂ ಕೂಡ ಟಿಕೆಟ್ ವಿಚಾರವಾಗಿ ಹೈಡ್ರಾಮಾವೇ ನಡೆಯಿತು.ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ  ಟಿಕೆಟ್ ಗಾಗಿ ಕಿತ್ತಾಟ ನಡೆಯುತ್ತಿದೆ.. ಮೂರು ಪಕ್ಷಗಳಲ್ಲೂ ಕೆಲವೊಂದು ಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ಗಲಾಟೆ ಮತ್ತು ಗೊಂದಲಕ್ಕೆ ಕಾರಣವಾಗಿದೆ.. ಅದೇ ರೀತಿ ಜೆಡಿಎಸ್ ಪಕ್ಷದಲ್ಲೂ ಕೂಡ ಟಿಕೆಟ್ ಗಾಗಿ ಕಿತ್ತಾಟ ನಡೆಯುತ್ತಿದೆ.. ಇಂದು ಜೆಪಿ ಭವನದಲ್ಲಿ ಚಾಮರಾಜಪೇಟೆ ಟಿಕೆಟ್ ವಿಚಾರವಾಗಿ ಹೈಡ್ರಾಮಾವೇ ನಡೆಯ್ತು.

  ಜೆಪಿ ಭವನದಲ್ಲಿ ಕುಮಾರಸ್ವಾಮಿ ಪಂಚರತ್ನ ಸಮಾರೋಪ ಸಮಾರಂಭ ವಿಚಾರವಾಗಿ ಸಭೆ ಕರೆದಿದ್ರು.. ಈ ಸಭೆಗೆ ಹಲವು ಜೆಡಿಎಸ್ ನಾಯಕರು, ಮುಖಂಡರುಗಳು ಬಂದಿದ್ರು.. ಅದೇ ರೀತಿ ಚಾಮರಾಜಪೇಟೆ ಕಾರ್ಯಕರ್ತರು ಮತ್ತು ನಾಯಕರುಗಳು ಬಂದಿದ್ರು. ಈ ಸಂದರ್ಭದಲ್ಲಿ ಎರಡು ಬಳಗಳ ನಡುವೆ ಕಿರಿಕ್ ನಡೆಯುತ್ತು.ಮೊದಲಿನಿಂದಲೂ ಚಾಮರಾಜಪೇಟೆಯಲ್ಲಿ ಜೆಡಿಎಸ್ ನಿಂದ ಇಮ್ರಾನ್ ಪಾಷ ಸ್ಪರ್ಧೆ ಮಾಡುತ್ತಾರೆ ಎಂದು ಕೇಳಿಬರುತ್ತಿತು‌. ಆದ್ರೆ ಕೆಲವು ತಿಂಗಳುಗಳ ಹಿಂದೆ ಗೋವಿಂದರಾಜ ಎಂಬುವವರು ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಸೇರ್ಪಡೆಯಾಗಿದ್ರು. ಈಗ ಅವರು ಕೂಡ ಆ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎಂಬ ಚರ್ಚೆಗಳು ನಡೆಯುತ್ತಿದ್ದವು.ಇಂದು ಹೆಚ್‌ಡಿಕೆಯನ್ನು ಭೇಟಿಯಾಗಲು ಗೋವಿಂದರಾಜ ಕಡೆಯವರು ಬಂದಿದ್ರು. ಈ ಸಮಯದಲ್ಲಿ ಇವರನ್ನು ನೋಡಿದ ಇಮ್ರಾನ್ ಪಾಷ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ರು. ಜಮೀರ್ ಜೊತೆ ಜೆಡಿಎಸ್ ಗೆ ಮೋಸ ಮಾಡಿ ಹೋದವರು ನೀವು. ಇಂದು ಜೆಡಿಎಸ್ ಕಚೇರಿಗೆ ಬಂದಿದ್ದೀಯಾ ಎಂದು ಕಿಡಿ ಕಾರಿದ್ರು. ಪರಸ್ಪರ ಉರ್ದುವಿನಲ್ಲಿ ಬೈದಾಡಿಕೊಂಡ ಬೆಂಬಗಲಿಗರು‌.‌ ಕಿರಿಕ್ ದೊಡ್ಡದಾಗುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ಎರಡು ಕಡೆ ಬೆಂಬಲಿಗರನ್ನು ಹೊರ ಕಳಿಹಿಸಿದ್ರು‌

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಪತ್ರ ವದಂತಿ: ಸಿಎಂ ರಿಯ್ಯಾಕ್ಷನ್ ಹೀಗಿತ್ತು

ಆನ್‌ಲೈನ್‌ ಬೆಟ್ಟಿಂಗ್, ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಶಕ್ಕೆ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಮುಂದಿನ ಸುದ್ದಿ
Show comments