ಬಿಜೆಪಿ ಶಾಸಕರೊಬ್ಬರು ಕೆಲವು ಸಲ ಕೊರೊನಾ ಪರೀಕ್ಷೆಗೆ ಒಳಪಟ್ಟ ಬಳಿಕ ಇದೀಗ ಪಾಸಿಟಿವ್ ವರದಿ ಬಂದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಲ್ಲಿ ಕೋವಿಡ್ – 19 ದೃಢಪಟ್ಟಿದೆ.
ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಪಾಸಿಟಿವ್ ವರದಿ ಖಚಿತಪಡುತ್ತಿದ್ದಂತೆ ಶಾಸಕರು ಹೋಂ ಐಸೋಲೇಷನ್ ಗೆ ಒಳಗಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಖಚಿತಪಡಿಸಿರುವ ಶಾಸಕ ಎಂ.ಪಿ.ರೇಣುಕಾರ್ಯ, ತಮ್ಮ ಜೊತೆ ಇದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಷೇತ್ರದ ಜನರು ಸಮಸ್ಯೆಗಳಿದ್ದರೆ ಫೋನ್ ಮಾಡಿ ಹೇಳಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.