Publish Date: Wed, 13 Apr 2022 (20:08 IST)
Updated Date: Wed, 13 Apr 2022 (20:10 IST)
ಸೆಪ್ಟೆಂಬರ್ 11ರ ದುರಂತದ ಬಳಿಕ ಮತ್ತೆ ನ್ಯೂಯಾರ್ಕ್ ಜನತೆ ಬೆಚ್ಚಿಬಿದ್ದಿದ್ದಾರೆ..ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗ ಮಾರ್ಗದ ರೈಲು ನಿಲ್ದಾಣದಲ್ಲಿ ದುಷ್ಕರ್ಮಿಯೊಬ್ಬ ಹಲವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು,16 ಜನರು ಗಾಯಗೊಂಡಿದ್ದಾರೆ. ಇದು ಬ್ರೂ ಕ್ಲಿನ್ನಲ್ಲಿರುವ ರೈಲು ಸುರಂಗ ಮಾರ್ಗವೊಂದರ ಸ್ಟೇಶನ್ನಲ್ಲಿ ನಡೆದಿದ್ದು, ಆರೋಪಿಯು ಮುಖಕ್ಕೆ ಗ್ಯಾಸ್ ಮಾಸ್ಕ್ ಧರಿಸಿದ್ದ & ನಿರ್ಮಾಣ ಕಾಮಗಾರಿ ನಡೆಸುವವರು ಧರಿಸುವ ವೇಸ್ಟ್ ಕೋಟ್ ಹಾಕಿಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಗುಂಡಿನ ದಾಳಿ ನಡೆದ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಲಾಗಿದ್ದು, ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.. ಶೂಟೌಟ್ ನಡೆದ ಬಳಿಕದ ದೃಶ್ಯಗಳೂ ಸದ್ಯ ಎಲ್ಲೆಡೆ ವೈರಲ್ ಆಗಿವೆ.