Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣ; ಪ್ರಶಾಂತ್ ಸಂಬರಗಿ ಪರವಾಗಿ ನಿಂತ ನಳೀನ್ ಕುಮಾರ್ ಕಟೀಲು

ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣ; ಪ್ರಶಾಂತ್ ಸಂಬರಗಿ ಪರವಾಗಿ ನಿಂತ ನಳೀನ್ ಕುಮಾರ್ ಕಟೀಲು
ಬೆಂಗಳೂರು , ಶುಕ್ರವಾರ, 11 ಸೆಪ್ಟಂಬರ್ 2020 (12:23 IST)
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ವಿರುದ್ಧ ಆರೋಪ ಮಾಡಿದ ಪ್ರಶಾಂತ್ ಸಂಬರಗಿ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಬ್ಯಾಟ್ ಬೀಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಳೀನ್ ಕುಮಾರ್ ಕಟೀಲು, ರಾಜ್ಯದಲ್ಲಿ ನಡೆಯುತ್ತಿರುವ ಮಾದಕದ್ರವ್ಯ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಜಾಣ ಮೌನಕ್ಕೆ ಶರಣಾಗಿದೆ. ಬಂಧಿತ ನಟಿ ಸಂಜನಾಳೊಂದಿಗೆ ಕಾಂಗ್ರೆಸ್ ಶಾಸಕರೊಬ್ಬರು ಶ್ರೀಲಂಕಾಕ್ಕೆ ಪಾರ್ಟಿಗೆ ತೆರಳಿದ್ದು ಸತ್ಯವಲ್ಲವೇ? ಪ್ರತ್ಯೇಕವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಈ ಪಕ್ಷ ಮಾದಕದ್ರವ್ಯ ಜಾಲವನ್ನು ಬೆಂಬಲಿಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಡ್ರಗ್ಸ್ ವಿರುದ್ಧ ಧ್ವನಿ ಎತ್ತಿದ ಪ್ರಶಾಂತ್ ಸಂಬರಗಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೇಸ್ ಹಾಕುತ್ತಾರೆ ಎಂದರೆ  ಈ ಕಾಂಗ್ರೆಸ್ ಪಕ್ಷ ಹಾಗೂ ಅದರ ಶಾಸಕರು ಯಾವರೀತಿ ಡ್ರಗ್ಸ್ ಮಾಫಿಯಾದ ಪರವಾಗಿದ್ದಾರೆ ಎಂಬುದನ್ನು ಅರಿಯಬಹುದು. ಆದಕಾರಣ ಡ್ರಗ್ಸ್ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷವೂ ನಿರ್ಮೂಲನೆ ಆಗಬೇಕು ಎಂದು  ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿಚಕ್ರ ವಾಹನಗಳ ಕಳ್ಳತನ ತಡೆಯಲು ಹೊಸ ಮಾರ್ಗ ಕಂಡುಹಿಡಿದ ಜಪಾನ್ ವ್ಯಕ್ತಿ