ಸಿಲಿಕಾನ್ ಸಿಟಿಯಲ್ಲೊಂದು ಸೀರೆ ಕಳ್ಳರ ಗ್ಯಾಂಗ್

Webdunia
ಬುಧವಾರ, 23 ಆಗಸ್ಟ್ 2023 (20:07 IST)
ಬೆಂಗಳೂರಿನ ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಮತ್ತು ಆಶೋಕನಗರ ಪೊಲೀಸ್ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಂಥದ್ದೊದು ಖರ್ತಾನಾಕ್ ಕಳ್ಳರ ಗ್ಯಾಂಗ್ ನ ಖೆಡ್ಡಗೆ ಬೀಳಿಸಿದ್ದಾರೆ.. ಆಂಧ್ರಪ್ರದೇಶ ಮೂಲದ ಸುನೀತಾ, ಮಟ್ಟಪತಿರಾಣಿ, ರತನಾಲು, ಶಿವಕುಮಾರ್, ಶಿವರಾಮ್ ಪ್ರಸಾದ್, ಭರತ್ ಕಳವು ಮಾಡೋಕೆ ಅಂತಾನೇ ಬೆಂಗಳೂರಿಗೆ ಬರ್ತಿದ್ರು.. ಹಾಗೇ ಬರ್ತಿದ್ದ ಈ ಟೀಂ ಬರುವಾಗಲೇ ಹೈ ಪೈ ಆಗಿ ಡ್ರೆಸ್ ಮಾಡ್ಕೊಂಡು, ನಗರದಲ್ಲಿರುವ ಪ್ರತಿಷ್ಠಿತ ಸೀರೆ ಅಂಗಡಿಗಳನ್ನು ಟಾರ್ಗೇಟ್ ಮಾಡ್ತಿದ್ರು.. ಜನ ಜಾಸ್ತಿ ಇರೊ ಟೈಂ ನೋಡಿ ಸೀರೆ ಅಂಗಡಿಗಳಿಗೆ ಎಂಟ್ರಿಯಾಗ್ತಿದ್ದ ಈ ಗ್ಯಾಂಗ್, ನಮ್ದು ಮದುವೆ ಇದೆ ಬಟ್ಟೆ ಗ್ರಾö್ಯಂಡ್ ಆಗಿ ಇರಬೇಕು ರೇಟು ಎಷ್ಟಾದ್ರು ಪರವಾಗಿಲ್ಲ ತೋರಿಸಿ ಅಂತಿದ್ರು

ಅಂಗಡಿ ಸಿಬ್ಬಂದಿ ಸೀರೆಗಳನ್ನು ತೋರಿಸೋಕೆ ಮುಂದಾದ ವೇಳೆ, ಇನ್ನು ಚನ್ನಾಗಿರೋದು ತೊರಿಸಿ, ಒಂದು ಲಕ್ಷ ಮೇಲ್ಪಟ್ಟು ಸೀರೆಗಳಿಲ್ವ ಇದ್ರೆ ಅವನ್ನು ತೋರಿಸಿ ಅಂತಿದ್ರು.. ಸುಮಾರು ಇಪ್ಪತ್ತಕ್ಕೂ ಅಧಿಕ ಕಾಸ್ಲ್ಟಿ  ಸೀರೆಗಳನ್ನು ಒಟ್ಟಿಗೆ ನೋಡೋ ನೆಪದಲ್ಲಿ ಎಲ್ಲರು ಒಟ್ಟಿಗೆ ಸೇರಕೊಂಡು ಕ್ಯಾಮರಾ ಮತ್ತು ಇತರೆ ಸಿಬ್ಬಂದಿಗೆ ಕಾಣದಂತೆ ಅಡ್ಡ ನಿಂತ್ಕೋತಿದ್ರು.. ಕೆಲವೇ ಕ್ಷಣದಲ್ಲಿ ಒಂದೋ ಎರಡೋ ಸೀರೆಗಳನ್ನು ಕದ್ದು, ಇನ್ನು ಚನ್ನಾಗಿರೋದು ಬೇಕು ಮತ್ತೆ ಬರ್ತಿವಿ ಅಂತಾ ಎಸ್ಕೇಪ್ ಆಗಿಬಿಡ್ತಿದ್ರು.. ಈ ಗ್ಯಾಂಗ್ ಹೊರಗೆ ಹೋದ ಮೇಲೆ ಸೀರೆ ಲೆಕ್ಕ ಮಾಡುತ್ತಿದ್ದ ಸಿಬ್ಬಂದಿ ಸೀರೆಗಳು ಕಾಣದೇ ಇದ್ದಾಗ ಸಿಸಿಟಿವಿ ಪರಿಶೀಲನೆ ನಡೆಸಿದ್ರು.. ಈ ವೇಳೆ ಈ ಗ್ಯಾಂಗ್ ನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.. ಈ ಸಂಬAಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಆರು ಜನರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಬಿಜೆಪಿ, ಜೆಡಿಎಸ್ ಗೆ ಮಹತ್ವದ ಸಂದೇಶ ಕೊಟ್ಟ ಡಿಕೆ ಶಿವಕುಮಾರ್

ಒಪ್ಪಂದದ ಬಗ್ಗೆ ಸಂಚಲನ ಸೃಷ್ಟಿಸುತ್ತಿದೆ ಡಿಕೆ ಶಿವಕುಮಾರ್ ಇಂದಿನ ಟ್ವೀಟ್

ಪಹಲ್ಗಾಮ್ ದಾಳಿ ಆಂತರಿಕ ದಂಗೆ ಎಂದಿದ್ದ ಅಮೆರಿಕಾ: ಈಗ ವೈಟ್ ಹೌಸ್ ದಾಳಿಯನ್ನು ಉಗ್ರರದ್ದು ಎನ್ನುತ್ತಿದೆ

ಡಿಕೆ ಶಿವಕುಮಾರ್ ರನ್ನು ಅಷ್ಟು ಬೇಗ ಬಿಟ್ಟು ಕೊಡಲ್ಲ ರಾಹುಲ್ ಗಾಂಧಿ: ಕಾರಣವೇನು ಗೊತ್ತಾ

Karnataka Weather: ಬೆಂಗಳೂರಿಗೆ ಚಳಿ, ಯಾವೆಲ್ಲಾ ಜಿಲ್ಲೆಗಳಿಗೆ ಮಳೆ ಇಲ್ಲಿದೆ ಹವಾಮಾನ ವರದಿ

ಮುಂದಿನ ಸುದ್ದಿ
Show comments