Select Your Language

Notifications

webdunia
webdunia
webdunia
Wednesday, 9 April 2025
webdunia

ಸಿದ್ದು ಮತ್ತೆ ಸಿಎಂ ಆಗಲೆಂದು ‘ಅಹಿಂದ’ ಪೂಜೆ

ಸಿದ್ದು ಮತ್ತೆ ಸಿಎಂ ಆಗಲೆಂದು ‘ಅಹಿಂದ’ ಪೂಜೆ
bangalore , ಸೋಮವಾರ, 15 ಮೇ 2023 (18:10 IST)
ರಾಜ್ಯದಲ್ಲಿ ಸಿಎಂ ಆಯ್ಕೆ ಜಟಾಪಟಿ ಮುಂದುವರೆದಿದ್ದು, ರಾಜ್ಯದ ಜನರ ಕುತೂಹಲ ಕೆರಳಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು ಸಿಎಂ ಆಗಬೇಕು ಅಂದ್ರೆ, ಡಿಕೆಶಿ ಅಭಿಮಾನಿಗಳು ಡಿಕೆಶಿಯೇ ಸಿಎಂ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲೆಂದು ಸಿದ್ದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ..
ಅಹಿಂದ ಮುಖಂಡರು 101 ತೆಂಗಿನಕಾಯಿ ಒಡೆದು ದಾವಣಗೆರೆಯ ದುಗ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಸಿದ್ದು ಸಿಎಂ ಆಗಬೇಕೆಂಬುದು ಕುರುಬ ಸಮಾಜ ಸೇರಿದಂತೆ ವಿವಿಧ ಸಮುದಾಯಗಳಿಂದ ಒಕ್ಕೊರಲ ಮನವಿಯಾಗಿದೆ. ಕುರುಬ ಸಮಾಜದ ಮುಖಂಡ ಲಿಂಗರಾಜ್ ನೇತೃತ್ವದಲ್ಲಿ ದಾವಣಗೆರೆ ನಗರದ ದೇವತೆ ದುಗ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದೆ. ಬಡವರ ಭಾಗ್ಯ ಸಿದ್ದರಾಮಯ್ಯನವರು.. ಸಿದ್ದರಾಮಯ್ಯ ಸಿಎಂ ಆದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ.. ಈ ಹಿನ್ನೆಲೆ ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತವರಿನಲ್ಲಿ ‘ಸಿಎಂ ಸಿದ್ದು’ ಫ್ಲೆಕ್ಸ್​ ಹಾರಾಟ