ನಿಮಗೆ ತಾಕತ್ತಿದ್ದರೆ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಸಂಘ ಪರಿವಾರವನ್ನು ಮುಟ್ಟಿ ನೋಡಿ ಎಂದು KPCC ಅಧ್ಯಕ್ಷ D.K. ಶಿವಕುಮಾರ್ಗೆ ಶಾಸಕ ರೇಣುಕಾಚಾರ್ಯ ಬಹಿರಂಗ ಸವಾಲು ಹಾಕಿದ್ದಾರೆ. ದಾವಣಗೆರೆಯ ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ನಮ್ಮ ಸಂಘಟನೆಗಳನ್ನು ಮುಟ್ಟಿ, ಆಮೇಲೆ ನಿಮ್ಮ ಕತೆ ಏನಾಗುತ್ತದೆ ನೋಡಿ. ಚುನಾವಣೆ ಸಂದರ್ಭದಲ್ಲಿ ಈ ರೀತಿ ವಿವಾದಾತ್ಮಕ ಹೇಳಿಕೆ ಗೌರವ, ಶೋಭೆ ತರುವಂತದಲ್ಲ. ವೋಟು ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದು ಪರ ಸಂಘಟನೆ ಕಟ್ಟಲು ಆಗುವುದಿಲ್ಲ. ಇದು ಹಿಂದು ದೇಶ. ಹಿಂದು ದೇಶದಲ್ಲಿ ನಾವಿದ್ದೇವೆ. ನಾವೇನು ಮುಸ್ಲಿಂ, ಕ್ರಿಶ್ಚಿಯನ್ನರನ್ನು ಹೊಡೆದು ಓಡಿಸುತ್ತಿದ್ದೇವಾ?.. PFI, SDPI ಇದೆ. ಅದರ ಬಗ್ಗೆ ನೀವು ಏಕೆ ಚಕಾರ ಎತ್ತಲ್ಲ. ಕೇವಲ ಹಿಂದು ಪರ ಸಂಘಟನೆಗಳ ಮೇಲೆ ಟಾರ್ಗೆಟ್ ಮಾಡುತ್ತೀರಲ್ಲ ನಿಮ್ಮ ಉದ್ದೇಶ ಏನು ಎಂದು ಡಿಕೆಶಿಗೆ ರೇಣುಕಾಚಾರ್ಯ ಪ್ರಶ್ನೆ ಮಾಡಿದರು. ಕಾಂಗ್ರೆಸ್ ಇಂತಹ ಹೇಳಿಕೆಯಿಂದ ತನ್ನ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದೆ. ಈ ದೇಶದಲ್ಲಿ ಕಾಂಗ್ರೆಸ್ ಮುಕ್ತ ಆಗಿದೆ. ರಾಜ್ಯದಲ್ಲೂ ಮುಕ್ತ ಆಗುತ್ತದೆ ಎಂದು ಭವಿಷ್ಯ ನುಡಿದರು.