Select Your Language

Notifications

webdunia
webdunia
webdunia
webdunia

ಎಲ್ಲರನ್ನು MLA ಮಾಡಕಾಗಲ್ಲ- ಡಿಕೆಶಿ

ಎಲ್ಲರನ್ನು MLA ಮಾಡಕಾಗಲ್ಲ- ಡಿಕೆಶಿ
bangalore , ಶುಕ್ರವಾರ, 17 ಮಾರ್ಚ್ 2023 (21:17 IST)
ಕಾಂಗ್ರೆಸ್​ ಟಿಕೆಟ್​ಗಾಗಿ 1,250 ಜನ ಅರ್ಜಿ ಹಾಕಿದ್ದಾರೆ.. ಎಲ್ಲರಿಗೂ MLA ಆಗಬೇಕೆನ್ನುವ ಆಸೆ ಇದೆ. ಪ್ರತಿಯೊಬ್ಬರು ಸೇರಿನೇ ಪಕ್ಷ ಆಗಿರೋದು. ಈಗಾಗಲೇ ಐದು ಸಭೆ ಮಾಡಿ ಚರ್ಚೆ ಮಾಡಿದ್ದೇವೆ.. ಎಂಟು ಸರ್ವೆ ಆಗಿದೆ, ಸರ್ವೆ ಪ್ರಕಾರ ಒಂದು ನಿರ್ಧಾರಕ್ಕೆ ಬರ್ತೀವಿ ಎಂದು ದೆಹಲಿಯಲ್ಲಿ KPCC ಅಧ್ಯಕ್ಷ D.K. ಶಿವಕುಮಾರ್​ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಲ್ಲರ ನರನಾಡಿ ಗೊತ್ತಿದೆ.. ನಾನು ಪೂಜಾರಿ ಅಷ್ಟೇ.. ಜನ ಹೇಳಿದ್ದನ್ನು ದೇವರಿಗೆ ತಲುಪಿಸೋದು ನನ್ನ ಕೆಲಸ.. ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ.. ಕೆಲವೊಮ್ಮೆ ಪಕ್ಷಕ್ಕಾಗಿ ತ್ಯಾಗ ಮಾಡಬೇಕಾಗುತ್ತದೆ ಎಂದು ಹೇಳಿದ್ರು. ಟಿಕೆಟ್​ ಸಿಗದವರನ್ನು MLC ಮಾಡುತ್ತೇವೆ.. ಪಕ್ಷ ಅಧಿಕಾರಕ್ಕೆ ಬಂದರೆ ಹೆಚ್ಚಿನವರಿಗೆ ಅವಕಾಶ ನೀಡಲು ಪ್ರಯತ್ನಿಸುತ್ತೇವೆ ಎಂದು ಡಿಕೆಶಿ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

‘ಕೈ’ ಟಕೆಟ್​ಗಾಗಿ ಮುಂದುವರೆದ ಲಾಭಿ​​​