Select Your Language

Notifications

webdunia
webdunia
webdunia
webdunia

ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಲೋಕಾಯುಕ್ತಗೆ ದೂರು

Complaint to Lokayukta against MLA Nisarga Narayanaswamy
bangalore , ಗುರುವಾರ, 16 ಮಾರ್ಚ್ 2023 (16:38 IST)
ದೇವನಹಳ್ಳಿಶಾಸಕ‌ ನಿಸರ್ಗ ನಾರಯಾಣ ಸ್ವಾಮಿ ವಿರುದ್ಧ ಭ್ರಷ್ಟಚಾರ ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು  ಸಲ್ಲಿಕೆಯಾಗಿದೆ. ಶಾಸಕ ನಿಸರ್ಗ ನಾರಾಯಣಸ್ವಾಮಿ ಬಡವರ ಜಮೀನಿನ ದಾಖಲೆಗಳನ್ನ ಅಕ್ರಮ ತಿದ್ದುಪಡಿ ಮಾಡಿರುವ ಬಗ್ಗೆ ಸಾಮಜಿಕ ಕಾರ್ಯಕರ್ತ ಜಗದೀಶ್ ದೂರು ನೀಡಿದ್ದಾರೆ. ಸರ್ಕಾರಿ ನೌಕರರ ಪ್ರತಿಭಟನೆ ವೇಳೆ ಬಡವರ ಆಸ್ತಿ ಕಬಳಿಸಲು ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.
 
ಸರ್ಕಾರಿ ನೌಕರರ ಮುಷ್ಕರ ದಿನದಂದು ತಾಲೂಕು ಕಚೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಕ್ರಮ ಪ್ರವೇಶ ಮಾಡಿ
ಕಚೇರಿಗೆ ಹೊರಗಡೆಯಿಂದ ಬೀಗ ಜಡಿದು ಒಳಗಡೆ ಸೇರಿಕೊಂಡು ದಾಖಲೆಗಳ ತಿದ್ದುಪಡಿ ಮಾಡಿರುವ ಆರೋಪ‌ ಮಾಡಲಾಗಿದೆ.ಆ ದಿನ ನೂರಾರು ಜನ ಜಮಾಯಿಸುತ್ತಿದ್ದಂತೆ ಶಾಸಕರು ಪೊಲೀಸ್ರ ಸಹಾಯದಿಂದ ಸ್ಥಳದಿಂದ ಪರಾರಿಯಾಗಿದ್ರು‌.
ಭೂ ಮಾಫಿಯಾ, ಭೂ ಕಬಳಿಕೆಯ ದಂಧೆಯಲ್ಲೂ ತೊಡಗಿ ಪ.ಜಾತಿ ಪ.ಪಂಗಡದವರಿಗೆ ಯಾವುದೇ ಕೆಲಸವನ್ನ ಮಾಡಿಕೊಡದ ಆರೋಪ ಮಾಡಿದ್ದಾರೆ. ಹದ್ದುಗಿಡ ಹಳ್ಳದ ರಾಜಕಾಲುವೆ ಒಳಗೊಂಡಂತೆ 15 ಎಕರೆ ಭೂಮಿಯನ್ನ ಕಬಳಿಕೆ ಮಾಡಿ ಎನ್ಎಂ ಇನ್ ಕ್ಲೋವ್ ಅನ್ನುವ ಬಡಾವಣೆಯ ನಿರ್ಮಾಣಮಾಡಿದ್ದು,
ಇದಕ್ಕೆ ಸರ್ಕಾರಿ ದಾಖಲೆಗಳನ್ನ ತಿರುಚಿ ಆಸ್ತಿ ಕಬಳಿಕೆ ಮಾಡಿರುವ ಆರೋಪ ಮಾಡಲಾಗಿದೆ. ಈ ಆರೋಪಗಳ ದಾಖಲೆಗಳ ಸಹಿತ ಜಗದೀಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 20ರಂದು ಮುಷ್ಕರಕ್ಕೆ ಕರೆ ನೀಡಿರುವ ಆಟೋ ಚಾಲಕರು