Publish Date: Thu, 16 Mar 2023 (16:35 IST)
Updated Date: Thu, 16 Mar 2023 (16:38 IST)
ಮಾರ್ಚ್ 20ರಂದು ಆಟೋ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.ನಗರದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಲಿದ್ದಾರೆ.ಇಂದಿನಿಂದ 3ದಿನಗಳ ಕಾಲ ಆಟೋಗಳಿಗೆ ಕಪ್ಪು ಬಾವುಟ ಕಟ್ಟಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲಿದ್ದು,ಜಯನಗರದಲ್ಲಿರುವ ಶಾಲಿನಿ ಗ್ರೌಂಡ್ ಬಳಿ ಆಟೋಗಳಿಗೆ ಕಪ್ಪು ಬಾವುಟವನ್ನ ಚಾಲಕರು ಕಟ್ಟುತ್ತಿದ್ದಾರೆ.ಇಂದಿನಿಂದ 3ದಿನಗಳ ಕಾಲ ಸರ್ಕಾರ ಕ್ಕೆ ಆಟೋ ಚಾಲಕರು ಗಡುವು ನೀಡಿದ್ದಾರೆ.ಬೇಡಿಕೆ ಈಡೇರಿಸದಿದ್ದರೆ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೂ ಆಟೋ ಚಾಲಕರು ಮುಷ್ಕರ ನಡೆಸಲಿದ್ದಾರೆ.