Select Your Language

Notifications

webdunia
webdunia
webdunia
webdunia

ಇಂದು ಅನಂತ್ನಾಗ್ ಬರ್ತ್ಡೇ: ಎವರ್ಗ್ರೀನ್ ಹೀರೋ ಕೈಯಲ್ಲಿ ವಿಭಿನ್ನ ಪಾತ್ರಗಳು

ಇಂದು ಅನಂತ್ನಾಗ್ ಬರ್ತ್ಡೇ: ಎವರ್ಗ್ರೀನ್ ಹೀರೋ ಕೈಯಲ್ಲಿ ವಿಭಿನ್ನ ಪಾತ್ರಗಳು
ಬೆಂಗಳೂರು , ಶನಿವಾರ, 4 ಸೆಪ್ಟಂಬರ್ 2021 (12:06 IST)
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ನಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಅಮೋಘ ಅಭಿನಯದ ಮೂಲಕ ದೊಡ್ಡ ಅಭಿಮಾನಿ ವರ್ಗವನ್ನೇ ಹೊಂದಿರುವ ಅನಂತ್ ನಾಗ್ ಅವರು ಇಂದು 74ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನಾಯಕ ನಟನಾಗಿಂದ ಹಿಡಿದು ಪೋಷಕ ನಟನವರೆಗೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಅನಂತ್ನಾಗ್ ಅವರು ಸದ್ಯ ಒಂದಷ್ಟು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಚಿತ್ರೀಕರಣದಿಂದ ದೂರವಿದ್ದ ಅನಂತ್ನಾಗ್ ಅವರು ಈಗ ಮತ್ತೆ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ.
ಇತ್ತೀಚೆಗಷ್ಟೇ ದೃಶ್ಯ-2′ ಚಿತ್ರೀಕರಣದಲ್ಲಿ ಭಾಗವಹಿಸಿರುವ ಅನಂತ್ ನಾಗ್ ಅವರ, “ಮೇಡ್ ಇನ್ ಬೆಂಗಳೂರು’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದರ ಜೊತೆಗೆ ರಕ್ಷಿತ್ ಶೆಟ್ಟಿ ಪರಂವಾ ಸ್ಟುಡಿಯೋ ನಿರ್ಮಾಣದಲ್ಲಿ ತಯಾರಾಗುತ್ತಿರುವ “ಆಬ್ರಕಡಾಬ್ರ’ ಚಿತ್ರದಲ್ಲೂ ಅನಂತ್ನಾಗ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದಲ್ಲದೇ ಯೋಗರಾಜ್ ಭಟ್ ನಿರ್ದೇಶನದ “ಗಾಳಿಪಟ-2′ ಚಿತ್ರದಲ್ಲೂ ಅನಂತ್ನಾಗ್ ನಟಿಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ಅನಂತ್ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಅಭಿಯಾನಕ್ಕೆ ಸ್ಟಾರ್ ನಟರು ಕೈ ಜೋಡಿಸಿದ್ದಾರೆ. ನಟರಾದ ಯಶ್, ಪುನೀತ್ ರಾಜ್ಕುಮಾರ್, ರಕ್ಷಿತ್, ರಿಷಭ್ ಸೇರಿದಂತೆ ಅನೇಕ ನಟರು ಈ ಅಭಿಯಾನಕ್ಕೆ ಸಾಥ್ ನೀಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ ಪದಕ ವಿಜೇತ ರವಿಕುಮಾರ್ ಪವರ್ ಸ್ಟಾರ್ ಪುನೀತ್ ಅಭಿಮಾನಿ!