Webdunia - Bharat's app for daily news and videos

Install App

ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರೇರಣಾ

Webdunia
ಭಾನುವಾರ, 2 ಅಕ್ಟೋಬರ್ 2022 (20:33 IST)
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಂದೆಯಾಗಿದ್ದಾರೆ. ಬೆಂಗಳೂರಿನ ಬನಶಂಕರಿ ಅಕ್ಷ ಆಸ್ಪತ್ರೆಯಲ್ಲಿ ಅವರ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿ ಹಂಚಿಕೊಂಡಿರುವ ಧ್ರುವ ಸರ್ಜಾ, ತಾಯಿ-ಮಗು ಆರೋಗ್ಯವಾಗಿದ್ದಾರೆ. ಪತ್ನಿಗೆ ನಾರ್ಮಲ್ ಡೆಲಿವರಿ ಆಗಿದೆ ಎಂದು ಸೋಶಿಯಲ್ ಮೀಡಿಯಾ ಮೂಲಕ. ಶನಿವಾರ ಸಂಜೆ ಪ್ರೇರಣಾ ಅವರನ್ನು ಕೆಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಧ್ರುವ ಸರ್ಜಾ ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟು ಆಸ್ಪತ್ರೆಗೆ ಆಗಮಿಸಿದ್ದರು. ಇದೀಗ ಹೊಸ ಕುಡಿ ಆಗಮನದ ಸುದ್ದಿ ಬೆನ್ನಲ್ಲೇ ಸರ್ಜಾ ಕುಟುಂಬಸ್ಥರು ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ. 2019 ರಲ್ಲಿ ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾರನ್ನು ವಿವಾಹವಾಗಿದ್ದರು. ಈ ಶುಭ ಸಮಾರಂಭದ ಬೆನ್ನಲ್ಲೇ, ಅಂದರೆ 2020ರಲ್ಲಿ ಸರ್ಜಾ ಕುಟುಂಬದಿಂದ ಚಿರಂಜೀವಿ ಸರ್ಜಾ ಅಗಲಿದ್ದರು. ಇದಾದ ಬಳಿಕ ಸರ್ಜಾ ಕುಟುಂಬದಲ್ಲಿ ಯಾವುದೇ ಮಹತ್ವದ ಶುಭ ಸಮಾರಂಭ ನಡೆಯಲಿಲ್ಲ. ಇದೀಗ ಧ್ರುವ ಸರ್ಜಾ ದಂಪತಿಗಳ ಮೂಲಕ ಮತ್ತೊಮ್ಮೆ ಕುಟುಂಬದಲ್ಲಿ ಸಂತಸ ಮನೆ ಮಾಡಿರುವುದು ವಿಶೇಷ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments