Publish Date: Thu, 27 Oct 2022 (17:04 IST)
Updated Date: Thu, 27 Oct 2022 (17:07 IST)
ಸಂದರ್ಶನವೊಂದದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆ ಗಂಧದಗುಡಿ ಚಿತ್ರೀಕರಣದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಗಂಧದಗುಡಿ ಪುನೀತ ಪರ್ವದ ಬಗ್ಗೆ ಮಾತನಾಡಿದ ಅವರು ಥಿಯೇಟರ್ಗೆ ಬಂದು ಚಿತ್ರ ನೋಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಅಪ್ಪು ಪತ್ನಿ ಅಶ್ವಿನಿ ಗಂಧದಗುಡಿ ಬಗ್ಗೆ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ, ಪುನೀತ ಪರ್ವ ಮಾಡಿದ್ದೇ ಅಭಿಮಾನಿಗಳಿಗಾಗಿ.. ಪುನೀತ ಪರ್ವ ಸಂತೋಷ ಮತ್ತು ತೃಪ್ತಿ ನೀಡಿದೆ. ಅಭಿಮಾನಿಗಳಿಗೆ ನಮ್ಮ ಕುಟುಂಬ ಚಿರಋಣಿಯಾಗಿದೆ. ಎಲ್ಲರ ಬೆಂಬಲದಿಂದ ಕಾರ್ಯಕ್ರಮ ಚೆನ್ನಾಗಿ ಆಗಿದೆ. ಈ ಗಂಧದಗುಡಿಯಲ್ಲಿ ಜರ್ನಿನೆ ಸಿನಿಮಾವಾಗಿ ಮೂಡಿಬಂದಿದೆ. ನಾನು ಅಪ್ಪು ಟೀಂ ಜೊತೆ ಟ್ರಕ್ಕಿಂಗ್ ಮಾಡಿದ್ದೆ. ಗಂಧದ ಗುಡಿ ನನಗೆ ಹೆಮ್ಮೆ ಕೊಡುವ ಪ್ರಾಜೆಕ್ಟ್ ಆಗಿತ್ತು. ಎಲ್ಲರೂ ಗಂಧದಗುಡಿ ನೋಡಿ, ಆಶೀರ್ವದಿಸಿ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಮನವಿ ಮಾಡಿದ್ದಾರೆ