ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿದ್ದ ಎರಡನೇ ಸಿನಿಮಾ ‘ಮಾಯಾಬಜಾರ್ 2016’ ತಮಿಳಿಗೆ ರಿಮೇಕ್ ಆಗಲಿದೆ.
ಈ ಸಿನಿಮಾ ಕನ್ನಡದಲ್ಲಿ ಒಳ್ಳೆ ಹೆಸರು ಮಾಡಿತ್ತು. ನಿರ್ದಿಷ್ಟವಾಗಿ ನಾಯಕನಿಲ್ಲದಿದ್ದರೂ ಬಹುತಾರಾಗಣದ ಈ ಸಿನಿಮಾದ ಕಥಾವಸ್ತು ಎಲ್ಲರಿಗೂ ಇಷ್ಟವಾಗಿತ್ತು. ಇದೀಗ ನಿರ್ದೇಶಕ ಸುಂದರ್ ಸಿ ಈ ಸಿನಿಮಾವನ್ನು ತಮಿಳಿಗೆ ರಿಮೇಕ್ ಮಾಡಲಿದ್ದಾರಂತೆ. ಆ ಮೂಲಕ ರಾಧಾಕೃಷ್ಣ ರೆಡ್ಡಿಯವರ ಚೊಚ್ಚಲ ನಿರ್ದೇಶನದ ಸಿನಿಮಾವೊಂದು ತಮಿಳಿಗೆ ರಿಮೇಕ್ ಆಗುತ್ತಿದೆ.