Publish Date: Sat, 05 Sep 2020 (11:08 IST)
Updated Date: Sat, 05 Sep 2020 (11:11 IST)
ಬಾಲಿವುಡ್ ನಲ್ಲಿ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಕಂಗನಾ ರಣಾವತ್ ಒಬ್ಬರು.
ಟ್ವಿಟರ್‌ಗೆ ನಟಿ ಕಂಗನಾ ಸೇರ್ಪಡೆಯಾದ ಬೆನ್ನಲ್ಲೇ ಈ ನಟಿ ಅಂತರ್ಜಾಲದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ.
ಇಂದು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ತನ್ನ ತರಗತಿಯ ವಾರ್ಷಿಕ ದಿನದ ಆಚರಣೆ ಫೋಟೋ ಹಂಚಿಕೊಂಡಿದ್ದಾರೆ.
1 ನೇ ತರಗತಿಯ ವಾರ್ಷಿಕ ದಿನದ ಫೋಟೊ ಶೇರ್ ಮಾಡಿರುವ ನಟಿ ಕಂಗನಾ, ನಾವು ಪಹಡಿ ನಾಟ್ಟಿ ಪ್ರದರ್ಶಿಸಿದ್ದೇವು ಮತ್ತು ನಮ್ಮ ಶಿಕ್ಷಕರಿಂದ ಉಡುಗೊರೆಗಳನ್ನು ಪಡೆದುಕೊಂಡಿದ್ದೇವೆ. ಅನೇಕ ಮಹಾನ್ ಶಿಕ್ಷಕರು ನನ್ನ ಜೀವನಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಅಭಿವೃದ್ಧಿಯಲ್ಲಿ ಸೇರಿದ್ದಾರೆ. ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು # ಹ್ಯಾಪಿಟೀಚರ್ಸ್ ಡೇ 2020 ' ಎಂದು ಟ್ವೀಟ್ ಮಾಡಿದ್ದಾರೆ.